ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಾದೇವಿ ಹಿರೇಮಠರಿಗೆ ಅಭಿನಂದನೆ

ಕೊಪ್ಪಳ :- ಕೊಪ್ಪಳ ಜಿಲ್ಲೆಯ ಮಹಿಳಾ ಬರಹಗಾರ್ತಿಯರಲ್ಲಿಯೇ ಹೆಸರು ಮಾಡಿರುವಂಥವ ಶಾಂತಾದೇವಿ ಹಿರೇಮಠರಿಗೆ ಈ ಸಲದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತ್ತ್‌ನ ೨೦೧೧ನೇ ಸಾಲಿನ ಡಿ.ಮಾಣಿಕರಾವ್ ಸ್ಮಾರಕ ದತ್ತಿ    ಪ್ರಶಸ್ತಿ ದೊರೆತಿದೆ. ಹಿರಿಯ ವಯಸ್ಸಿನಲ್ಲೂ ಸತತವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶಾಂತಾದೇವಿ ಹಿರೇಮಠರಿಗೆ ಪ್ರಶಸ್ತಿ ಸಿಕ್ಕಿರುವುದು ಸೂಕ್ತವಾಗಿದೆ. ಅವರ ಮಾತುಕತೆ  ಎಂಬ ಹರಟೆಗಳ ಕೃತಿಗೆ ಈ ಪ್ರಶಸ್ತಿ ದೊರೆತಿದೆ. 
ಪ್ರಶಸ್ತಿ ಪುರಸ್ಕೃತ ಹಿರೇಮಠರಿಗೆ  ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಪ್ರೊ.ಅಲ್ಲಮಪ್ರಭು ಬೆಟ್ಟದೂರು,ಸಿರಾಜ್ ಬಿಸರಳ್ಳಿ, ಎನ್.ಜಡೆಯಪ್ಪ, ಶಿವಪ್ರಸಾದ ಹಾದಿಮನಿ,ಮಹೇಶ ಬಳ್ಳಾರಿ, ಶಿವಾನಂದ ಹೊದ್ಲೂರ ಸೇರಿದಂತೆ  ಸಕಲ ಕವಿಸಮಯ ಬಳಗ  ಅಭಿನಂದನೆಗಳನ್ನು ಸಲ್ಲಿಸಿದೆ.ಅವರ ಸಾಹಿತ್ಯ ಕೃಷಿ ನಿರಂತರವಾಗಿರಲಿ ಎಂದು ಹಾರೈಸಿದೆ
Please follow and like us:
error