ಉದ್ಯೋಗಖಾತ್ರಿ : ಜಿಲ್ಲೆಯ ೯೧ ಗ್ರಾ.ಪಂ. ಗಳಿಗೆ ೯.೧೦ ಕೋಟಿ ರೂ. ಅನುದಾನ ಬಿಡುಗಡೆ

 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ತಕ್ಷಣ ಉದ್ಯೋಗ ನೀಡಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಪ್ರತಿ ಗ್ರಾ.ಪಂ.ಗೆ ತಲಾ ೧೦ ಲಕ್ಷ ರೂ.ಗಳಂತೆ ಜಿಲ್ಲೆಯ ೯೧ ಗ್ರಾಮ ಪಂಚಾಯತಿಗಳಿಗೆ ಒಟ್ಟು ೯. ೧೦ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು,  ಯೋಜನೆ ಅನುಷ್ಠಾನಕ್ಕೆ ಯಾವುದೇ ಹಣದ ಕೊರತೆ ಇಲ್ಲ, ಕೂಲಿಕಾರರು ಗುಳೇ ಹೋಗುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ತಿಳಿಸಿದ್ದಾರೆ.
  ಕಳೆದ ತಿಂಗಳು ಜಿಲ್ಲೆಯ ೭೫ ಗ್ರಾಮ ಪಂಚಾಯತಿಗಳಿಗೆ ಮೊದಲ ಹಂತದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ ೧೦ ಲಕ್ಷ ರೂ.ಗಳಂತೆ ಒಟ್ಟು ೭. ೫ ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಲಾಗಿತ್ತು.  ಇದೀಗ ಎರಡನೆ ಹಂತದಲ್ಲಿ ಜಿಲ್ಲೆಯ ಒಟ್ಟು ೯೧ ಗ್ರಾಮ ಪಂಚಾಯತಿಗಳಿಗೆ ಒಟ್ಟು ೯. ೧೦ ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಿದೆ.  ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ೧೭. ೮೮ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ.  ಅನುದಾನ ಬಿಡುಗಡೆಗೊಳಿಸಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ನಿಯಮಗಳನುಸಾರ ಷರತ್ತಿಗೊಳಪಟ್ಟು ಅನುದಾನದ ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ.  ಎರಡನೆ ಹಂತದಲ್ಲಿ  ಅನುದಾನ ಬಿಡುಗಡೆ ಮಾಡಲಾಗಿರುವ ಗ್ರಾಮ ಪಂಚಾಯತಿಗಳ ವಿವರ ಇಂತಿದೆ.  ಕೊಪ್ಪಳ ತಾಲೂಕಿನ ಬಹದ್ದೂರಬಂಡಿ, ಬಂಡಿಹರ್ಲಾಪುರ, ಬೆಟಗೇರಿ, ಭಾಗ್ಯನಗರ, ಚಿಕ್ಕಬೊಮ್ಮನಾಳ, ಗಿಣಿಗೇರಾ, ಗುಳದಳ್ಳಿ, ಹಟ್ಟಿ, ಹೊಸಹಳ್ಳಿ, ಹಿರೇಸಿಂದೋಗಿ, ಕೋಳೂರು, ಕಿನ್ನಾಳ, ಲೇಬಗೇರಿ, ಓಜನಹಳಿ, ಮತ್ತೂರು ಸೇರಿ ೧೫ ಗ್ರಾ.ಪಂ.ಗಳಿಗೆ ೧. ೫೦ ಕೋಟಿ.  ಗಂಗಾವತಿ ತಾಲೂಕಿನ  ಆಗೋಲಿ, ಆನೆಗುಂದಿ, ಬೇವಿನಹಾಳ, ಚಳ್ಳೂರ, ಚಿಕ್ಕಬೆಣಕಲ್, ಚಿಕ್ಕಡಂಕನಕಲ್, ಚಿಕ್ಕಮಾದಿನಾಳ, ಢಣಾಪುರ, ಗುಂಡೂರ, ಹಣವಾಳ, ಹೇರೂರು, ಹಿರೇಖೇಡ, ಹೊಸಕೇರಾ, ಹುಲಿಹೈದರ, ಹುಳ್ಕಿಹಾಳ, ಕನಕಗಿರಿ, ಕರಡೋಣ, ಕೇಸರಹಟ್ಟಿ, ಮರ್ಲಾನಹಳ್ಳಿ, ಮುಸ್ಲಾಪುರ, ಮುಸ್ಟೂರು, ಸಂಗಾಪುರ, ಸಿದ್ದಾಪುರ, ಶ್ರೀರಾಮನಗರ, ಸುಳೇಕಲ್, ಉಳೇನೂರ, ವಡ್ಡರಹಟ್ಟಿ  ಸೇರಿ ೨೭ ಗ್ರಾ.ಪಂ. ಗಳಿಗೆ ೨. ೭೦ ಕೋಟಿ. ಕುಷ್ಟಗಿ ತಾಲೂಕಿನ ಅಡವಿಬಾವಿ, ಬೆನಕನಾಳ, ಬಿಜಕಲ್, ಚಳಗೇರಾ, ದೋಟಿಹಾಳ, ಹಿರೇಬನ್ನಿಗೋಳ, ಹಿರೇಮನ್ನಾಪುರ, ಹಿರೇಗೊಣ್ಣಾಗರ, ಜುಮ್ಲಾಪುರ, ಕಂದಕೂರ, ಕಾಟಾಪುರ, ಕಿಲ್ಲಾರಹಟ್ಟಿ, ಕೊರಡಕೇರಾ, ಮಾಲಗಿತ್ತಿ, ಮೆಣೆದಾಳ, ಮುದೇನೂರ, ನಿಲೋಗಲ್, ಸಂಗನಾಳ, ತಾವರಗೇರಾ, ತುಗ್ಗಲಡೋಣಿ, ಯರಗೇರಾ ಸೇರಿ ೨೧ ಗ್ರಾ.ಪಂ.ಗಳಿಗೆ ೨. ೧೦ ಕೋಟಿ ಹಾಗೂ ಯಲಬುರ್ಗಾ ತಾಲೂಕಿನ ಬಳಗೇರಾ, ಬಂಡಿ, ಬನ್ನಿಕೊಪ್ಪ, ಬೆಣಕಲ್, ಬೇವೂರ, ಬಾನಾಪುರ, ಚಿಕ್ಕಮ್ಯಾಗೇರಿ, ಗೆದಿಗೇರಿ, ಗುನ್ನಾಳ, ಹಿರೇಅರಳಿಹಳ್ಳಿ, ಹಿರೇಮ್ಯಾಗೇರಿ, ಇಟಗಿ, ಕಲ್ಲೂರ, ಕರಮುಡಿ, ಕುದರಿಮೋತಿ, ಕುಕನೂರ, ಮಂಡಲಗೇರಿ, ಮಾಟಲದಿನ್ನಿ, ಮುಧೊಳ, ಮುರಡಿ, ರಾಜೂರ, ಸಂಗನಹಾಳ, ಶಿರೂರ, ತಳಕಲ್, ತಾಳಕೇರಾ, ವಜ್ರಬಂಡಿ, ವಣಗೇರಿ, ಯರೇಹಂಚಿನಾಳ ಸೇರಿ ೨೮ ಗ್ರಾ.ಪಂ. ಗಳಿಗೆ ೨. ೮೦ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. 
  ಸದ್ಯ ಗ್ರಾ.ಪಂ. ಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ವೇತನವನ್ನು ಮೊದಲ ಆದ್ಯತೆ ಮೇರೆಗೆ ಪಾವತಿಸಬೇಕು, ೨೦೧೨-೧೩ ನೇ ಸಾಲಿನಲ್ಲಿ ಅನುಮೋದಿಸಿದ ಕಾಮಗಾರಿಗಳಿಗೆ ಮಾತ್ರ ವೆಚ್ಚ ಭರಿಸಬೇಕು.  ಕಾಮಗಾರಿಗಳನ್ನು ಕಾರ್ಯಕ್ರಮ ಅಧಿಕಾರಿಗಳಿಂದ ಶೇ. ೨೫ ಹಾಗೂ ಅನುಷ್ಠಾನಾಧಿಕಾರಿಗಳಿಂದ ಶೇ. ೧೦೦ ರಷ್ಟು ಪರಿಶೀಲನೆ ನಡೆಸಿದ ಬಗ್ಗೆ ದೃಢೀಕರಿಸಬೇಕು, ಅನುದಾನದಿಂದ ಚಿರಾಸ್ತಿ, ಚರಾಸ್ಥಿ ಸೃಜಿಸಿದಲ್ಲಿ, ಸೂಕ್ತ ದಾಖಲೆ ನಿರ್ವಹಿಸಬೇಕು, ಒಂದು ಕುಟುಂಬಕ್ಕೆ ಒಂದೇ ಜಾಬ್‌ಕಾರ್ಡ್ ಇರುವಂತೆ ಅಗತ್ಯ ಕ್ರಮ ವಹಿಸಬೇಕು, ಪ್ರತಿ ಕಾಮಗಾರಿಗೆ ಪ್ರತ್ಯೇಕ ಕಡತ ನಿರ್ವಹಿಸಬೇಕು, ೩ನೇ ತಂಡದವರು ಶಿಫಾರಸ್ಸು ಮಾಡಿದ ಮೊತ್ತಕ್ಕೆ ಮಾತ್ರ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದ್ದು, ಈ ಷರತ್ತುಗಳನ್ನು ಪಾಲಿಸದೆ ಇದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಸೂಚನೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ. ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ತಿಳಿಸಿದ್ದಾರೆ.

Leave a Reply