You are here
Home > Koppal News > ರಾಷ್ಟೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ

ರಾಷ್ಟೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ

ಕೊಪ್ಪಳ :  ಸೋಮುವಾರ   ರಾಷ್ಟ್ರೀಯ  ಯೋಜನಾ ಘಟಕ ಸರ್ಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳದಲ್ಲಿ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು 
ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಎಸ್.ಪಿ.ಕುಲಕರ್ಣಿಯವರು ಮಾತನಾಡಿ ಎನ್.ಎಸ್.ಎಸ್ ಗುರಿ ಧೆಯೋದ್ದೇಶಗಳು ಯುವಕರಲ್ಲಿ ಸೇವಾ ಮನೋಭಾವನೆಯನ್ನ ಬೆಳೆಸುವುದರ ಜೋತೆಗೆ ನನಗಾಗಿ ರಾಷ್ಟ್ರವಲ್ಲ ರಾಷ್ಟ್ರಕ್ಕಾಗಿ ನಾನು ಎಂಬ ಧ್ಯೆಯ ವಾಕ್ಯದ ಬಗ್ಗೆ ರಾಷ್ಟ್ರ ನಿರ್ಮಾಣದಲ್ಲಿ ಎನ್.ಎಸ್.ಎಸ್ ಯೋಜನೆಗಳ ಕಾರ್ಯಕ್ರಮಗಳನ್ನು ಕುರಿತಾಗಿ ತಿಳಿಸಿದರು. ಕಾರ್ಯಕ್ರಮಾಧಿಕಾರಿಯಾದ ಶ್ರೀ ವಾಸುದೇವ.ಜಿ.ಅಡವಿಬಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ವಿರೇಶ ಅಡೆವೆಪ್ಪ ಕನಕಗೆರಿ ಸ್ವಾಗತಿಸಿದರು, ಕುಮಾರಿ ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ವಿ.ಹೆಚ್.ಮಂಡಸೊಪ್ಪಿ ವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ಹೆಚ್.ಎಸ್. ತಿಮ್ಮಾರೆಡ್ಡಿ, ಅಹಮ್ಮದ ಮಹಿಯುದ್ದಿನ   ಅಡವಿರಾವ್ ಕಸಬೆ,   ಪ್ರಕಾಶ  ಬೊಸ್ಲೆ , ಶ್ರೀಕಾಂತ ಬಂಡಿಹಾಳ, ಶ್ರೀಮತಿ ಹೇಮಾ ಜೆ., ಶ್ರೀಮತಿ ರತ್ನಾಬಾಯಿ.ವಾಯ್.ಕೆ,  ಎಸ್.ಜಿ ಹೊಸಭಾವಿ ಉಪಸ್ಥಿತರಿದ್ದರು. 
ಕಾರ್ಯಕ್ರಮದ ಕೊನೆಯಲ್ಲಿ ಕುಮಾರಿ ಮಂಜುಳಾ ಸುಖಮುನಿಯಪ್ಪ ವಂದಿಸಿದರು. 

Leave a Reply

Top