fbpx

ನಗರಸಭೆ ಪೌರಾಯುಕ್ತ ಸಿ.ಆರ್.ರಂಗಸ್ವಾಮಿ ಸೇಡಿನ ದುರಾಡಳಿತ -ಖಂಡನೆ.

ಗಂಗಾವತಿ ನಗರಸಭೆ ಪೌರಾಯುಕ್ತರಾದ ಸಿ.ಆರ್.ರಂಗಸ್ವಾಮಿ ಸೇಡಿನ ದುರಾಡಳಿತ ನಡೆಸುತ್ತಿದ್ದಾರೆಂದು ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೇಕಲ್, ಗಂಗಾವತಿ ನಗರದ ಗುಂಡಮ್ಮಕ್ಯಾಂಪ್‌ನಲ್ಲಿರುವ ದೊಡ್ಡಿಲೇಜೌಟ್‌ನಲ್ಲಿ ಚರಂಡಿಯನ್ನು ದುರಸ್ತಿಗೊಳಿಸದೇ ಅಲ್ಲಿ ವಾಸವಿರುವ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್‌ರವರ ಮನೆಗೂ ಹಾಗೂ ದೊಡ್ಡಿಲೇಔಟ್‌ನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ದಕ್ಷಿಣದ ಗೋಡೆಗೆ ಧಕ್ಕೆಯಾಗಿ ಸೊಳ್ಳೆಗಳ ಕಾಟ ಮತ್ತು ಮನೆಗಳ ಬುನಾದಿ ಸಡಿಲಗೊಂಡು ಮನೆಗಳು ಮತ್ತು ಶಾಲೆ
ಕಟ್ಟಡ ಬೀಳುವ ಸಾಧ್ಯತೆ ಇದೆ. ಇದರ ಬಗ್ಗೆ ಅನೇಕ ಬಾರಿ ನಗರಸಭೆಗೆ ದೂರು ಸಲ್ಲಿಸಿದರೂ
ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಸರಕಾರಿ ಶಾಲೆಯ ಮುಖ್ಯೋಪಾದ್ಯಾಯರು ಶಾಲೆಯ ದಕ್ಷಿಣ
ಗೋಡೆ ಕೆಸರಿನಲ್ಲಿ ಮುಳುಗಿದ್ದರೂ ತಮ್ಮ ಸಂಬಂಧವಿಲ್ಲವಂತೆ ವರ್ತಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಗಂಗಾವತಿ ನಗರದ ಸ್ವಚ್ಛತೆ ಬಗ್ಗೆ ಯಾವುದೇ ಕಾಳಜಿಯಿಲ್ಲದೇ ತಮಗೆ
ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಸಿ.ಆರ್. ರಂಗಸ್ವಾಮಿ ಕೂಡಲೇ ಕ್ರಮ ಜರುಗಿಸಿ
ದೊಡ್ಡಿಲೇಔಟ್‌ನ್ನು ಸ್ವಚ್ಛಗೊಳಿಸದಿದ್ದಲ್ಲಿ ಜನವರಿ ೨೬ ರಿಪಬ್ಲಿಕ್ ದಿನದಿಂದ ಗಂಗಾವತಿ
ಪ್ರಗತಿಪರ ವೇದಿಕೆಯಿಂದ ಗಂಗಾವತಿ ನಗರ ಸ್ವಚ್ಛವಾಗುವವರೆಗೂ ಅನಿರ್ಧಿಷ್ಠ ಕಾಲ ಧರಣಿ
ನಡೆಸಲಾಗುವುದು.

Please follow and like us:
error

Leave a Reply

error: Content is protected !!