ಮಧ್ಯದಿಂದ ಸರ್ಕಾರ ನಡೆಸುವ ಪ್ರಯತ್ನ: ವಿರೋಧ: ಕೆಜಿಎಲ್‌ಯು

ಸಮಾಜವಾದಿ ನಿಲುವಿನಿಂದ ಬಂದಂತಹ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಡಿಯುವ ಜನರ ಪರ ಕಾಳಜಿಯನ್ನು ಬಿಟ್ಟು ಹೊಸ ಮಧ್ಯದ ನೀತಿ ತಂದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತುಂಬಲು ಪ್ರಯತ್ನಿಸುತ್ತಿರುವುದು ಅವರ ಬಡಜನ ವಿರೋಧಿ ನೀತಿಯಾಗಿದೆ ಎಂದು ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘದ ಹಿರಿಯ ಮುಖಂಡ ಎಂ. ವಿರುಪಾಕ್ಷಪ್ಪರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
೧೬ ಸಾವಿರ ಕೋಟಿ ಆದಾಯ ಪಡೆಯುವ ನಿಟ್ಟಿನಲ್ಲಿ ಅಬಕಾರಿ ನೀತಿಗಳನ್ನು ಬದಲಾಯಿಸಿ ಹೊಸ ಸನ್ನದುಗಳಿಗೆ ಅನುಮತಿ ನೀಡಲು ಹೊರಟಿರುವುದು ಈ ಸರ್ಕಾರದ ದಿವಾಳಿತನ ಎತ್ತಿತೋರಿಸುತ್ತಿದೆ ಎಂದಿದ್ದಾರೆ. 
ಕಳೆದ ಹತ್ತು ವರ್ಷಗಳಿಂದ ಯಾವುದೇ ಹೊಸ ಅಂಗಡಿಗಳಿಗೆ ಅನುಮತಿ ನೀಡಲಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು, ಅಬಕಾರಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸೇರಿಕೊಂಡು ರಾಜ್ಯದಲ್ಲಿ ಸಾವಿರಾರು ಸಿಎಲ್೭ ಅಂಗಡಿಗಳಿಗೆ ಅನುಮತಿ ಕೊಟ್ಟು, ಕಾನೂನು ಬಾಹೀರವಾಗಿ ಹಳ್ಳಿಗಳಲ್ಲಿ ಬೆಲ್ಟ್ ಶಾಪ್‌ಗಳನ್ನು ನಡೆಸುತ್ತಿದ್ದಾರೆ. 
ಈ ಕಾನೂನು ಬಾಹೀರ ದರೋಡೆಯನ್ನು ಸರ್ಕಾರ ಗಮನಿಸಿ, ನಿಯಂತ್ರಿಸಿದರೆ ಹಳ್ಳಿಗಳಲ್ಲಿ ನಾಗರೀಕರಿಗೆ ಸುಲಭಾಗಿ ಮಧ್ಯ ದೊರೆಯದೇ ಇರುತ್ತದೆ. ಆದ್ದರಿಂದ ಹಳ್ಳಿಗಳಲ್ಲಿ ಬಡ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಾದ್ಯವಾಗುತ್ತದೆ ಎಂದಿದ್ದಾರೆ. 
ಸರ್ಕಾರ ಯಾವುದೇ ಕಾರಣಕ್ಕೂ ಹೊಸ ಮಧ್ಯದ ಅಂಗಡಿಗಳಿಗೆ ಅನುಮತಿ ಕೊಟ್ಟರೆ, ತಮ್ಮ ಸಂಘಟನೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತದೆ ಎಂದು ವಿರುಪಾಕ್ಷಪ್ಪ  ತಿಳಿಸಿದ್ದಾರೆ.  
Please follow and like us:
error