ಸಂಗಣ್ಣ ಕರಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

ಕೊಪ್ಪಳ :

 ಮೆಕ್ಕೆಜೋಳ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಹಾಗೂ ಕಬ್ಬು ಬೆಳೆಗಾರರಿಗೆ ಏಕರೂಪ ರೀತಿಯ ಬೆಳೆ ಸೇರಿದಂತೆ ಕೃಷ್ಣ ಬಿ ಸ್ಕೀಂ ಮೂರನೇ ಹಂತದ ಕಾಮಗಾರಿ ಸೇರಿದಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಸಲು ಒತ್ತಾಯಿಸಿ ಜಿಲ್ಲೆಯ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ   ಕೊಪ್ಪಳದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ  ಹಮ್ಮಿಕೊಳ್ಳಲಾಗಿತ್ತು.  ರ್ಯಾಲಿಯಲ್ಲಿ  ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್‌ಜೋಷಿ,   ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಲಪ್ಪ ಆಚಾರ, ಸಂಸದ ಶಿವರಾಮಗೌಡ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮನವಳ್ಳಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿ ಎಚ್. ಗಿರೇಗೌಡ, ಮುಖಂಡ ದಡೇಸ್ಗೂರ ಬಸವರಾಜ್ ಸೇರಿದಂತೆ ಅನೇಕರು  ಭಾಗವಹಿಸಿದ್ದರು 

Please follow and like us:
error

Related posts

Leave a Comment