ಲೇದರಬಾಲ್ ೨೦:೨೦ ಕ್ರಿಕೇಟ್ ಟೂರ್ನಾಮೆಂಟ್

 ಕಲ್ಯಾಣಿಸ್ಟೀಲ್ ಲಿಮಿಟೆಡ್ ಉದ್ಯೋಗಿ ಆರ್. ಪ್ರಶಾಂತ ಇವರ ಸ್ಮರಣಾರ್ಥವಾಗಿ ಲೇದರಬಾಲ್ ೨೦:೨೦ ಕ್ರಿಕೇಟ್ ಟೂರ್ನಾಮೆಂಟ್
ಕೊಪ್ಪಳದ ನಿವಾಸಿಯಾಗಿದ್ದ   ಆರ್ ಪ್ರಶಾಂತ ತಂದೆ ಬಸವರಾಜ ಇವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾ ಸ್ಪೋರ್ಟ್ಸ್ ಅಕಾಡೆಮಿಯು ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಾಳೆಯಿಂದ ಅಂದರೆ ದಿನಾಂಕ:೨೫-೧೨-೨೦೧೩ ರಿಂದ ೨೯-೧೨-೨೦೧೩ರ ವರೆಗೆ ಲೇದರಬಾಲ್ ೨೦:೨೦ ಕ್ರಿಕೇಟ್ ಟೂರ್ನಾಮೆಂಟ್ ಪಂದ್ಯಾವಳಿಯನ್ನು ಆಯೋಜಿಸಿದೆ.
  ದಿ.ಪ್ರಶಾಂತರವರು ವೃತ್ತಿಯಲ್ಲಿ ಕಲ್ಯಾಣಿಸ್ಟೀಲ್ ಲಿಮಿಟೆಡ್ ಉದ್ಯೋಗಿಯಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಉತ್ತಮ ಆಲ್ ರೌಂಡರ್  ಕ್ರಿಕೇಟ್ ಆಟಗಾರರಾಗಿದ್ದರು. ಇವರ ಸ್ಮರಣಾರ್ಥವಾಗಿ ಇವರ ಕೊಪ್ಪಳದ ಸ್ನೆಹಿತರ ಬಳಗವು ಲೇದರಬಾಲ್ ೨೦:೨೦ ಕ್ರಿಕೇಟ್ ಟೂರ್ನಾಮೆಂಟ್‌ನ್ನು ಹಮ್ಮಿಕೊಂಡಿದೆ. ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ಖಲೀಲ ಪಟೇಲ್, ವಿನೋದ್ ಎಡವೆ, ರಾಘವೇಂದ್ರ, ರಾಜು ಪೂಜಾರ, ಮಲ್ಲಿಕಾರ್ಜುನ ಬೆಲ್ಲದ್, ಮಹಾಂತೇಶ ಹಾನಗಲ್ಲ, ಅಮಿತ್ ಬಾಚಲಾಪುರ ಶಿವಕುಮಾರ ಟಾಂಗದ್, ನಾಗರಾಜ ಬಾರಕೇರ, ಸಮೀರ್, ಸೈಯದ್ ಆಮೇರ್ ಹುಸೇನಿ, ನೂರ್‌ಬಾಷಾ, ಅನ್ವರ್ ಪಟೆಲ್, ಮುಸ್ತಫಾ,  ಹಾಗೂ ಇತರರು ತಿಳಿಸಿದ್ದಾರೆ. (೯೭೩೯೮೫೭೦೩೪, ೯೭೩೧೦೨೩೨೧೩)

Leave a Reply