You are here
Home > Koppal News > ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಿನ್ನಾಳದಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ.

ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಿನ್ನಾಳದಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ.

ದಿ. ೨೨  ರಂದು ಸ.ಪ.ಪೂ.ಕಾಲೇಜ ಕಿನ್ನಾಳದಲ್ಲಿ ೮ ನೇ ತರಗತಿಯ ಮಕ್ಕಳಿಗೆ ಸೈಕಲ್ ವಿತರಿಸಲಾಯಿತು. ಕಿನ್ನಾಳ ಗ್ರಾ.ಪಂ ಅಧ್ಯಕ್ಷರಾದ ವೀರಭದ್ರಪ್ಪ ಗಂಜಿಯವರು ಮಕ್ಕಳಿಗೆ ಸೈಕಲ್ ವಿತರಿಸುವ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾ.ಪಂ ಸದಸ್ಯರು ಅಮರೇಶ ಉಪಲಾಪೂರ ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದುಪಯೋಗವನ್ನು ಮಾಡಿಕೊಳ್ಳಬೇಕು ಉತ್ತಮ ಪ್ರಗತಿ ಸಾಧಿಸಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕೆಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಾಲಾ ಪತ್ತಾರ ಉಪಾಪ್ರಾಂಶಿಪಾಲರು ವಹಿಸಿಕೊಂಡಿದ್ದರು. ಶ್ರೀಮತಿ ಅರುಣಾ ನರೇಂದ್ರ ನಿರೂಪಿಸದರು. ಹೊನ್ನಪ್ಪ ಶಿಳ್ಳಿನ ಸ್ವಾಗತಿಸಿದರು. ಮಂಜುನಾಥ ಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಶ್ರೀದೇವಿ, ಕುಮಾರಿ ಅನಿತಾ ಪ್ರಾರ್ಥನೆಗೀತೆಯನ್ನು ಹಾಡಿದರು. ಮುತ್ತಣ್ಣ ಗಡಿ ವಂದನಾರ್ಪಣೆಯನ್ನು ಮಾಡಿದರು. ಶಾಲೆಯ ಶಿಕ್ಷಕರು, ಸಹ ಶಿಕ್ಷಕರು ಎಲ್ಲಾ ಸಿಬ್ಬಂದಿ ವರ್ಗದವರು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. 

Leave a Reply

Top