ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಸಿದ್ದೇಶ್ವರ ವೃತ್ತ ಕೊಪ್ಪಳ: ಶಾಲಾ ವಾರ್ಷಿಕೋತ್ಸವ

  ಕೊಪ್ಪಳ ನಗರದ ಬಿ.ಎಸ್.ಜಿ.ಎಸ್. ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ೫ನೇ ವರ್ಷದ ಶಾಲಾ ವಾರ್ಷಿಕೊತ್ಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಉಮೇಶ ಪೂಜಾರವರು ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಹಾಗೂ ರಾಷ್ಟ್ರಕ್ಕೆ ಮಾದರಿ ಯುವ ಜನಾಂಗವನ್ನು ಸೃಷ್ಠಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ನಡೆಯಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಸೇವೆಯನ್ನು ನಿಸ್ವಾರ್ಥದಿಂದ ಸಲ್ಲಿಸಬೇಕೆಂದರು, 
             ಇದೇ ಸಂದರ್ಭದಲ್ಲಿ ಹರ್ಲಾಪುರ ಕಾಲೇಜಿನ ಸಹಪ್ರಾದ್ಯಾಪಕರಾದ ಇಬ್ರಾಹಿಂ ಕುದರಿಮೋತಿ, ಪಾಷಾಮಾನ್ವಿ ನಗರಸಭೆಯ ಮಾಜಿ ಅದ್ಯಕ್ಷ ಚಂದ್ರಶೇಖರ ಕವಲೂರು, ತಾ.ಪಂ.ಸದಸ್ಯರಾದ ದಾನಪ್ಪ ಕವಲೂರು, ಆಯೂಬ್ ಅಡ್ಡೆವಾಲಿ, ಸಂಸ್ಥೆಯ ಕಾರ್ಯದರ್ಶೀ ಶಿವಕುಮಾರ ಕುಕನೂರು, ಹಾಗೂ ಸಹಕಾರ್ಯದರ್ಶಿ ಖಾಜಾವಲಿ ಕುದರಿಮೋತಿ ಈ ಸಂದರ್ಭದಲ್ಲಿ ಹಾಜರಿದ್ದರು, ಶಾಲೆಯ ಶಿಕ್ಷಕಿಯಾದ ಕು.ರಜೀಯಾ ಬೇಗಂ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

Leave a Reply