ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ ೧೩, ಕ್ಷೇತ್ರದ ಹುಲಿಗಿ, ಬೇವಿನಹಳ್ಳಿ, ಲಿಂಗದಳ್ಳಿ, ಗುಡದಳ್ಳಿ, ಅಲ್ಲಾನಗರ, ಕರ್ಕಿಹಳ್ಳಿ, ಮಂಗಳಾಪುರ ಗ್ರಾಮದಲ್ಲಿ ತುಂಗಭದ್ರಾ ಕಾಡಾ ಯೋಜನೆಯಡಿಯಲ್ಲಿ ರೂ.೧೫೦ ಲಕ್ಷದ ಸಿಸಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಜನತೆಗೆ ನೀಡಿದ ಆಶೋತ್ತರಗಳನ್ನು ಹಂತ-ಹಂತವಾಗಿ ಈಡೇರಿಸುತ್ತಿದೆ. ಈಗಾಗಲೇ ಶೂ-ಭಾಗ್ಯ ಯೋಜನೆಯಡಿಯಲ್ಲಿ
ಬಡವಿಧ್ಯಾರ್ಥಿಗಳಿಗೆ ರೂ.೧೨೦ ಕೋಟಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ
ಸಿದ್ದರಾಮಯ್ಯನವರು ಅನುದಾನವನ್ನು ಮಂಜೂರುಮಾಡಿದ್ದಾರೆ. ಎಲ್ಲಾ ವರ್ಗಗಳ ಜನರ
ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ನೀಡುತ್ತಿದ್ದು, ಇದರ ಪರಿಣಾಮವೆ ಕ್ಷೇತ್ರದ ೬
ಜಿಲ್ಲಾ ಪಂಚಾಯತ ಹಾಗೂ ೨೧ ತಾಲೂಕು ಪಂಚಾಯತಗಳಲ್ಲಿ ಕಾಂಗ್ರೆಸ್ ಪಕ್ಷವು ಜಯಬೇರಿ
ಬಾರಿಸಿದೆ. ಕ್ಷೇತ್ರದ ಜನತೆ ಅಭಿವೃದ್ಧಿಗಳನ್ನು ಗಮನಿಸಿ ನನ್ನನ್ನು ಇನ್ನೂ ಹೆಚ್ಚಿನ
ಕಾರ್ಯಪವೃತ್ತರಾಗುವಂತೆ ಮಾಡಿದೆ. ಈಗಾಗಲೇ ಸಣ್ಣ ಗ್ರಾಮಕ್ಕೆ ರೂ.೧ ಕೋಟಿ ಹಾಗೂ ದೊಡ್ಡ
ಗ್ರಾಮಗಳಿಗೆ ರೂ.೩ ರಿಂದ ೪ ಕೋಟಿ ಅನುದಾನವನ್ನು ನೀಡಿ ಗ್ರಾಮಗಳ ಸರ್ವಾಂಗೀಣ
ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

Please follow and like us:
error