ಬೆಂಬಲ ಬೆಲೆಯಲ್ಲಿ ಸೂರ‍್ಯಕಾಂತಿ ಮತ್ತು ಶೆಂಗಾಕಾಯಿ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ

ಕೊಪ್ಪಳ : ಸೂರ‍್ಯಕಾಂತಿ ಮತ್ತು ಶೆಂಗಾ ಬೆಳೆಯು ಕೊಪ್ಪಳ ಜಿಲ್ಲೆಯ ಮುಖ್ಯ ಬೆಳೆಗಳಾಗಿರುತ್ತವೆ. ಆದರೆ ಆ ಬೆಳೆಗೆ ಸರಿಯಾದ ಮಾರುಕಟ್ಟೆ ಲಭ್ಯವಿರುವುದಿಲ್ಲಾ ಕೂಡಲೆ ಬೆಂಬಲ ಬೆಲೆಯಲ್ಲಿ ಸೂರ‍್ಯಕಾಂತಿ ಮತ್ತು ಶೆಂಗಾ ಬೆಳೆಯ ಖರೀದಿ ಕೇಂದ್ರ ಪ್ರಾರಂಭಿಸಲು ಅಳವಂಡಿ ಮತ್ತು ಕವಲೂರು ಭಾಗದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ 
 ಕಳೆದ ಸಾಲಿನಲ್ಲಿ ಏಔಈ ರಾಯಚೂರು ಇವರು ನ್ಯಾಪೆಡ್ ಸಂಸ್ಥೆಯು ಮುಖಾಂತರ ಕೊಪ್ಪಳ ಜಿಲ್ಲೆಯಲ್ಲಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಮುಖಾಂತರ ಸೂರ‍್ಯಕಾಂತಿ ಮತ್ತು ಶೆಂಗಾಕಾಯಿ ಖರೀದಿ ಮಾಡಿ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಮಾಡಿ ರೈತರಿಗೆ ಒಳ್ಳೆಯ ಅನುಕೂಲ ಮಾಡಿಕೊಟ್ಟಿರುತ್ತಾರೆ. ಹೋದ ವರ್ಷ ಈ ಜಿಲ್ಲೆಯ ಕರೀದಿ ಕೇಂದ್ರ ಒಂದರಲ್ಲಿ ಐದು ಕೋಟಿ ರೂಪಾಯಿಗಳ ವ್ಯವಹಾರ ನಡೆದಿದ್ದು ಇರುತ್ತದೆ. ಮತ್ತು ಹೋದ ವರ್ಷ ಈ ಸಮಯ ಅಂದರೆ ಜನವೇರಿ ೨ ರಲ್ಲಯೇ ಖರೀದಿ ಪ್ರಾರಂಭಮಾಡಲಾಗಿತ್ತು.
ಈ ವರ್ಷವು ಕೂಡಾ ಈಗಾಗಲೇ ಸರ‍್ಯಕಾಂತಿ ಮತ್ತು ಶೆಂಗಾ ಕಟಾವು ಪ್ರಾರಂಭವಾಗಿದ್ದು ರಾಶಿ ಮಾಡಿದ ಬೆಳೆಯನ್ನು ರೈತರು ಮಾರುಕಟ್ಟೆಯಲ್ಲಿ ಭಾರತ ಸರ್ಕಾರವು ನಿಗದಿ ಪಡಿಸಿದ ಬೆಂಬಲ ಬೇಲೆಗೆ (ಸೂರ‍್ಯಕಾಂತಿ, ೩೭೫೦/ ಮತ್ತು ಶೆಂಗಾಕಾಯಿ ೪೦೦೦) ಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಆದರೆ (ಸೂರ‍್ಯಕಾಂತಿ ೩೧೦೦/ ಮತ್ತು ಶೆಂಗಾ ಕಾಯಿ ೩೫೦೦) ಇದರಂತೆ ರೈತರಿಗೆ ಪ್ರತಿಕ್ವಿಂಟಲಿಗೆ ೬೦೦ ರೂಪಾಯಿಯಿಂದ ೭೦೦ ರೂಪಾಯಿ ಕಡಿಮೆ ಬೆಲೆ ಸಿಗುತ್ತದೆ ಇಂತಹ ಸಮಯದಲ್ಲಿ ಸಂಭಂದಪಟ್ಟ ಅಧಿಕಾರಿಗಳು ಸಭೆಯನ್ನು ಜರುಗಿಸಿ ಕೂಡಲೆ ಪ್ರಕ್ರೀಯಯನ್ನು ಪ್ರಾರಂಭಿಸಲು ಸದರಿ ಸಂಸ್ಥೆಯವರಿಗೆ ನಿರ್ದೇಶನ ಕೊಡಬೇಕು ಈ ವಿಷಯವನ್ನು ಜಿಲ್ಲೆಯ ರೈತರು ಸಂಸದರಿಗೂ ಮತ್ತು ಶಾಸಕರನ್ನು ಜನಪ್ರತಿನಿಧಿಗಳನ್ನು ಬೇಟಿಯಾಗಿ ರೈತಿಗೆ ಆಗುವ ನಷ್ಟವನ್ನು ತಪ್ಪಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ. ಕೂಡಲೆ ಖರೀದಿ ಕೇಂದ್ರ ಪ್ರಾರಂಬಿಸಿದರೆ ರೈತರು ಕಷ್ಟದಿಂದ ಪಾರಾಗುತ್ತಾರೆ ಆದ್ದರಿಂದ ಏಔಈ ಸಂಸ್ಥೆಯವರು ಹಿಂದಿನ ವರ್ಷದಂತೆ ಕೂಡಲೆ ರೈತರ ಹಿತ ಕಾಪಾಡಬೇಕು ಇಲ್ಲವಾದರೆ ರೈತು ಉಗ್ರ ಹೋರಾಟಕ್ಕೆ ಇಳಿಯ ಬೇಕಾಗುತ್ತದೆ ಎಂದು ಸುರೇಶ ದಾಸರಡ್ಡಿ, ಗುರುರಾಜ ಹಳ್ಳಿಕೇರಿ, ಯಲ್ಲಪ್ಪ ಜೀರ್ ಈರಣ್ಣ ಶೆಟ್ಟರ, ಬಸವರಾಜ ಕಾತರಕಿ, ಗುರುಶಾಂತಪ್ಪ ಶೆಟ್ಟರ, ಪ್ರಕಾಶ ಸ್ವಾಮಿ ಇನಾಮದಾರ, ಶ್ರೀನಿವಾಸ ಕಲ್ಗುಡಿ, ಕವಲೂರು ಗ್ರಾಮದ ರೈತರು ಪ್ರಕಾಶ ಯರಾಶಿ, ಬಸವನಗೌಡ ಕೆಳಗಿನಗೌಡ್ರು, ಸಿದ್ದಪ್ಪ ಯರಾಶಿ, ಮತ್ತು ಬೇಟಗೇರಿ, ಮೈನಳ್ಳಿ, ಬಿಸರಳ್ಳಿ, ಭಾಗದ ರೈತರು ಒತ್ತಾಯಿಸಿದ್ದಾರೆ.

Leave a Reply