ಚಾರ್ಜ್‌‌ಗಿದ್ದ ಮೊಬೈಲ್‌ ಸ್ಫೋಟ: ಯುವಕನ ಸ್ಥಿತಿ ಗಂಭೀರ

 ಮೊಬೈಲ್​ ಚಾರ್ಜ್‌ಗೆ ಹಾಕಿ ಮಾತನಾಡುವಾಗ ಮೊಬೈಲ್ ಸ್ಫೋಟಗೊಂಡ ಘಟನೆ ಮೈಸೂರಿನ ಬನ್ನಿಮಂಟದ ಶೆಡ್​​ನಲ್ಲಿ ಈ ಘಟನೆ ಸಂಭವಿಸಿದೆ. 
ಸ್ಫೋಟದಿಂದ ಬಿಹಾರ ಮೂಲದ ಕೂಲಿ ಕಾರ್ಮಿಕ ಸೀತಾರಾಮ್ (18) ​ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದೆ. ಬಿಹಾರದಿಂದ ಗಾರೆ ಕೆಲಸಕ್ಕೆ ಆಗಮಿಸಿದ್ದ ಸೀತಾರಾಮ್​, ಇಂದು ಬೆಳಗ್ಗೆ ಮೊಬೈಲ್ ಚಾರ್ಜ್‌ಗೆ ಹಾಕಿ ಫೋನ್ ಮಾತನಾಡುತ್ತಿದ್ದು, ಈ ವೇಳೆ ಮೊಬೈಲ್ ಸ್ಪೋಟಗೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. 
Please follow and like us:
error