ಗುರು ಪೌರ್ಣಮಿಯ ಅಂಗವಾಗಿ ಗೌರವ ಸಮರ್ಪಣೆ ಹಾಗೂ ಸಂಗೀತ ಕಾರ್ಯಕ್ರಮ

ಕೊಪ್ಪಳ: ದಿ  ೦೫-೦೫-೨೦೧೫ ರಂದು ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವತಿಯಿಂದ ಗುರು ಪೌರ್ಣಮಿಯ ಅಂಗವಾಗಿ ಗೌರವ ಸಮರ್ಪಣೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಬಾಗ್ಯನಗರದ ಜಗದ್ಗುರು ಶಂಕರಚಾರ್ಯರಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಶಿವಪ್ರಕಾಶ ಆನಂದಸ್ವಾಮಿಜೀ, ಜಗದ್ಗುರು ಶಂಕರಚಾರ್ಯರಮಠ, ಭಾಗ್ಯನಗರ ಇವರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀನಿವಾಸ ಗುಪ್ತಾ, ವಾಣಿಜ್ಯೋದ್ಯಮಿಗಳು, ಭಾಗ್ಯನಗರ ಇವರು ವಹಿಸಿಕೊಳ್ಳುವರು ಹಾಗೂ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಅವರು ಭಾಗವಹಿಸುವರು.
ಪ್ರಸಿದ್ಧ ಹಾರ್ಮೋನಿಯಂ ವಾದಕರಾದ ಶ್ರೀ ವೇ|| ಹುಚ್ಚಯ್ಯಸ್ವಾಮಿ ಕಲ್ಮಠ ಇವರು ಸನ್ಮಾನ ಸ್ವಿಕರಿಸುವರು. ಗಾಯನ : ಶ್ರೀಮತಿ ಪುಪ್ಪಾವತಿ ಹೊಸಪೇಟೆ, ತಬಲಾ : ಜಲೀಲಪಾಶಾ ಗಂಗಾವತಿ ಮತ್ತು ಶ್ರೀ ಗವಿಸಿದ್ಧೇಶ್ವರ ಸ್ವರಸಂಚಾರ ಕಲಾವಿದರಾದ ಸೃಪ್ಠಿ ಸಾಲಿಮಠ, ಮೇಘಾ ಮೊರಗೇರಿ, ಶಶಾಂಕ ಅವರಾದಿ, ವೀಣಾ ಅರಕೇರಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
Please follow and like us:
error