ಡಿ. ೨೯ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಕೊಪ್ಪಳ  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮುನಿರಾಬಾದ್ ಹಾಗೂ ಯಲಬುರ್ಗಾ ತಾಲೂಕು ಮಂಗಳೂರಿನ ಬಾಪೂಜಿ ಡಿ.ಇಡಿ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಮಟ್ಟದ ಯುವಜನೋತ್ಸವ ಡಿ. ೨೯ ಮತ್ತು ೩೦ ರಂದು ಎರಡು ದಿನಗಳ ಕಾಲ ಮಂಗಳೂರಿನ ಬಾಪೂಜಿ ಡಿ.ಇಡಿ, ಕಾಲೇಜು ಆವರಣದಲ್ಲಿ ನಡೆಯಲಿದೆ.
  ಜಿಲ್ಲಾ ಮಟ್ಟದ ಯುವಜನೋತ್ಸವದ ಉದ್ಘಾಟನಾ ಸಮಾರಂಭ ಡಿ. ೨೯ ರಂದು ಬೆಳಿಗ್ಗೆ ೦೯ ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಸವದಿ ಅವರು ಉದ್ಘಾಟಿಸುವರು, ಸಂಸದ ಶಿವರಾಮಗೌಡ ಅವರು ಜ್ಯೋತಿ ಬೆಳಗಿಸುವರು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಕ್ರೀಡಾಜ್ಯೋತಿ ಬೆಳಗಿಸುವರು, ಶಾಸಕ ಈಶಣ್ಣ ಗುಳಗಣ್ಣವರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಸದಸ್ಯ ಅಶೋಕ ತೋಟದ, ಗಣ್ಯರಾದ ಬಸವರಾಜ ರಾಯರೆಡ್ಡಿ, ಬಾಪೂಜಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ಎಂ. ದೇಸಾಯಿ, ಕಾರ್ಯದರ್ಶಿ ಎ.ಸಿ. ಕಾಲಿಮಿರ್ಚಿ, ತಾ.ಪಂ. ಅಧ್ಯಕ್ಷೆ ನೀಲಮ್ಮ ಜವಳಿ, ಉಪಾಧ್ಯಕ್ಷ ಹೊಳೆಯನಗೌಡ ಪಾಟೀಲ, ಸದಸ್ಯರಾದ ಸುಮಂಗಲಮ್ಮ ಉಪ್ಪಾರ, ಮಂಜುನಾಥ ಛಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಗ್ವಾಗಿ, ಎನ್.ಎಸ್.ಎಸ್. ಘಟಕದ ರಾಜ್ಯ ಸಂಯೋಜನಾ ಅಧಿಕಾರಿ ರಾಮದಾಸಪ್ಪ, ಡಯಟ್ ಪ್ರಾಚಾರ್ಯರಾದ ಸುನಂದಮ್ಮ ಮೂಗನೂರ, ಪಿ.ಎಸ್.ಟಿ.ಇ. ವಿಭಾಗದ ಮುಖ್ಯಸ್ಥ ಯು.ಎನ್. ಬೆಟ್ಟದೂರ, ಬಾಪೂಜಿ ಡಿ.ಇಡಿ ಕಾಲೇಜು ಪ್ರಾಚಾರ್ಯ ಪಿ.ಐ. ಗುಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
Please follow and like us:
error