fbpx

ಡಂಬ್ರಹಳ್ಳಿ ಜಾತ್ರೆ ಜನಜಾಗತಿ ಯಾತ್ರೆ ಃ ಗವಿಮಠ ಶ್ರೀಗಳು

ಗ್ರಾಮ ದೇವತೆ ಜಾತ್ರೆಯನ್ನು ಪ್ರಾಣಿ ಬಲಿ ಇಲ್ಲದೇ ಯಶಸ್ವಿಯಾಗಿ ಮಾಡುವುದರ ಜೊತೆಗೆ ವಿವಿಧ ಜಾಗತಿ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ನೋಡಿದರೆ ಇದೊಂದು ಜನಜಾಗತಿ ಜಾತ್ರೆ ಯಾತ್ರೆಯಾಗಿ ಕಾಣುತ್ತದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ನುಡಿದರು.
ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವ ಹಾಗೂ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧಾಮಿ೯ಕ ಹಾಗೂ ಸಾಂಸ್ಕತಿಕ ಕಾಯ೯ಕ್ರಮ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀವ೯ಚನ ನೀಡಿದರು.
ಇದೊಂದು ಉಳಿದೆಲ್ಲ ಗ್ರಾಮಗಳಿಗೂ ಅನುಕರಣೀಯವಾಗಿದೆ.ಸಾಮಾನ್ಯವಾಗಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮತ್ತಿತರ ಮೌಢ್ಯ ಸಂಪ್ರದಾಯಗಳ ಆಚರಣೆಯೇ ಪ್ರಮುಖವಾಗಿರುತ್ತದೆ. ಆದರೆ, ಅದೆಲ್ಲವನ್ನು ಬದಿಗೊತ್ತಿ ಪ್ರಾಣಿ ಬಲಿ ಇಲ್ಲದೆಯೇ ಜಾತ್ರೆಯನ್ನು ಮಾಡಬಹುದು ಎನ್ನುವುದನ್ನು ಡಂಬ್ರಳ್ಳಿ ಗ್ರಾಮಸ್ಥರು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಇನ್ನು ಈ ಗ್ರಾಮ ಬಯಲು ಸೀಮೆಯಲ್ಲಿದ್ದರೂ ಕೂಡ ಮಲೆನಾಡಿನ ವಾತಾವರಣ ಹೊಂದಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ಎರಡು ಬದಿಯಲ್ಲಿ ಬಾಳೆ ತೋಟ,ವಿಳ್ಯದೆಲೆ ತೋಟ,ಹಸಿನಿಂದ ಕಂಗೊಳಿಸುತ್ತಿರುವುದನ್ನು ನೋಡುತ್ತಿದ್ದರೆ ನಾವು ಮಲೆನಾಡಿಗೆ ಬಂದಿದ್ದೇವೆ ಎನ್ನುವ ಭಾಸವಾಗುತ್ತದೆ. ಬಯಲು ಸೀಮೆಯಲ್ಲಿಯೂ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಡಂಬ್ರಳ್ಳಿ ಗ್ರಾಮಸ್ಥರು ಸಾಧಿಸಿ ತೋರಿಸಿದ್ದಾರೆ. ಇಲ್ಲಿ ಕೇವಲ ಹಬ್ಬ ಹರಿದಿನಗಳ ಸಂಭ್ರಮವಷ್ಟೆ ಅಲ್ಲದೇ, ಬದುಕಿನ ಸಂಭ್ರಮವು ಇದೆ. ಪ್ರತಿಯೊಬ್ಬರು ದುಡಿಮೆಯೇ ದೇವರು ಎಂದು ನಂಬಿ ಬೆವರಿಳಿಸುತ್ತಿರುವುದರಿಂದಲೆ ಬಯಲು ನಾಡನ್ನು ಮಲೆನಾಡು ಮಾಡಿದ ಕೀತಿ೯ ಇವರದಾಗಿದೆ.ಮನುಷ್ಯ ದುಡಿಮೆಯನ್ನು ಮೆಚ್ಚಬೇಕೇ ವಿನಃ ಆಸ್ತಿಯಾಗಿ ಆಪಾರ ಹಣ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು.ಅದರಿಂದ ಪ್ರಯೋಜನವು ಇಲ್ಲ.ಮನಸ್ಸಿಗೆ ನೆಮ್ಮದಿಯೂ ಇಲ್ಲ ಎಂದರು. 
ಕಾಯ೯ಕ್ರಮದ ಉಧ್ಘಾಟನೆ ನೆರವೇರಿಸಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು, ಡಂಬ್ರಳ್ಳಿ ಗ್ರಾಮದ ಯುವಕರು ಸಾಧನೆ ಶ್ಲಾಘನೀಯ. ಇಲ್ಲಿ ಸಾಂಘಿಕ ಪ್ರಯತ್ನ ನಡೆಯುತ್ತದೆ. ಇಡಿ ಊರು ಕ?ಷಿ,ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದೆ. ಡಂಬರಹಳ್ಳಿ ಗ್ರಾಮದ ಜನರಲ್ಲಿ ಜಾಗತಿಯಾಗಿರುವ ಕಾರಣ ಅವರ ಬದುಕು ಹಸನ ಮಾಡಿಕೊಂಡಿದ್ದಾರೆ.ಈ ಗ್ರಾಮ ಇತರೇ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಮಾತನಾಡಿ, ಗ್ರಾಮದ ಜನರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಡಂಬರಹಳ್ಳಿ ಗ್ರಾಮ ಒಂದು ವಿನೂತನ ಪ್ರಯತ್ನ ನಡೆಸುತ್ತಿದ್ದು,ಇನ್ನು ಹೆಚ್ಚು ಹೆಚ್ಚು ಪ್ರಗತಿ ಹೊಂದಲಿ ಎಂದು ಹಾರೈಸಿದರು.
ಮಾಜಿ ಶಾಸಕ ಸಂಗಣ್ಣ ಕರಡಿ ಮಾತನಾಡಿ, ಡಂಬರಹಳ್ಳಿ ಗ್ರಾಮವು ತೆರೆದ ವಿಶ್ವ ವಿದ್ಯಾಲಯ ಇದ್ದಂತೆ. ಅನೇಕ ಪ್ರತಿಭೆಗಳು ಈ ಗ್ರಾಮದಲ್ಲಿ ಇವೆ.ಸಾಹಿತ್ಯ ಕ್ಷೇತ್ರ ಸೇರಿದಂತೆ ಅತ್ಯಂತ ಬುದ್ದಿಜೀವಿಗಳು ಈ ಗ್ರಾಮದಲ್ಲಿದ್ದಾರೆ.ಈ ಗ್ರಾಮ ಇತರರಿಗೆ ಮಾದರಿ ಎಂದು ಶ್ಲಾಘೀಸಿದರು.
ಗ್ರಾಮದ ಮುಖಂಡರಾದ ರಾಮಚಂದ್ರಗೌಡ,ಬಾಳನಗೌಡ ಮಾತನಾಡಿದರು. ಕಾಯ೯ಕ್ರಮದಲ್ಲಿ ಟಚ್ ಫಾರ್ ಲೈಫ್ ಪೌಂಢೇಶನ್ ಸಂಸ್ಥಾಪಕ ಅಧ್ಯಕ್ಷ ನಾರಾ ಭರತರಡ್ಡಿ,ನಾಗನಗೌಡ ನಂದನಗೌಡ್ರ,ತಿಮ್ಮಾರಡ್ಡಿ ಕರಡ್ಡಿ,ದೇವರಡ್ಡಿ ಮಾಟ್ರ,ಕೇಶವರಡ್ಡಿ ಮಾದಿನೂರು,ಮಹಾದೇವಪ್ಪ ಹರಿಜನ,ವಿರೇಶ ಲಕ್ಷಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣಾರಡ್ಡಿ ಗಲಬಿ ಪ್ರಾಸ್ತಾವಿಕ ಮಾತನಾಡಿದರು. ದೇವರಡ್ಡಿ ಕರಡ್ಡಿ ಸ್ವಾಗತಿಸಿದರು.ರಾಮಣ್ಣ ಬಾರಕೇರ ಕಾಯ೯ಕ್ರಮ ನಿರೂಪಿಸಿದರು.ದೇವರಡ್ಡಿ ಮಾಟ್ರ ಕೊನೆಯಲ್ಲಿ ವಂದಿಸಿದರು. 
Please follow and like us:
error

Leave a Reply

error: Content is protected !!