ಕೃಷಿ ವಸ್ತುಪ್ರದರ್ಶನ ಮಳಿಗೆ ಪಡೆಯಲು ಸೂಚನೆ

ಶ್ರೀ ಗವಿಸಿದ್ದೇಶ್ವರ ಜಾತ್ರೆ : 
ಕೊಪ್ಪಳ ಡಿ.   ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಬೃಹತ್ ಕೃಷಿ ವಸ್ತುಪ್ರದರ್ಶನವನ್ನು ಬರುವ ಜ. ೧೧ ರಿಂದ ೧೩ ರವರೆಗೆ ಮೂರು ದಿನಗಳ ಕಾಲ ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಮೈದಾನದಲ್ಲಿ ಏರ್ಪಡಿಸಲಾಗುತ್ತಿದ್ದು, ಆಸಕ್ತ ಸಂಸ್ಥೆಗಳು ವಸ್ತು ಪ್ರದರ್ಶನ ಮಳಿಗೆಯನ್ನು ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.
  ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಜಾತ್ರಾ ಮೈದಾನದಲ್ಲಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಬೃಹತ್ ಕೃಷಿ ವಸ್ತುಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಈ ವಸ್ತುಪ್ರದರ್ಶನದಲ್ಲಿ ಕೃಷಿಯಲ್ಲಿನ ಇತ್ತೀಚಿಗಿನ ತಾಂತ್ರಿಕತೆ ಮತ್ತು ನೂತನ ಆವಿಷ್ಕಾರಗಳ ಮಾಹಿತಿಯನ್ನು ಪ್ರದರ್ಶಿಸಲಾಗುವುದು.  ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಕೃಷಿ ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ತಮ್ಮ ಕೃಷಿ ಉಪಕರಣ ಹಾಗೂ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಂಬಂಧಿಸಿದ ಉಪಕರಣಗಳು, ವಸ್ತುಗಳನ್ನು ಪ್ರದರ್ಶಿಸಲು ಇದು ಸೂಕ್ತ ವೇದಿಕೆಯಾಗಲಿದೆ.  ಪ್ರದರ್ಶಿಸ ಬಯಸುವ ಸಂಸ್ಥೆಗಳು ಕೂಡಲೆ ಕೃಷಿ ವಸ್ತುಪ್ರದರ್ಶನದ ಮಳಿಗೆಯನ್ನು ಕಾಯ್ದಿರಿಸಿಕೊಳ್ಳಲು ಜಂಟಿಕೃಷಿ ನಿರ್ದೇಶಕರು, ೦೮೫೩೯- ೨೨೦೨೨೬, ೨೨೧೬೩೩ ಅಥವಾ ಸಹಾಯಕ ಕೃಷಿ ನಿರ್ದೇಶಕರು- ೭೮೯೯೬೦೯೫೧೯ ಕ್ಕರ ಸಂಪರ್ಕಿಸುವಂತೆ  ತಿಳಿಸಿದೆ.
Please follow and like us:
error