ಭಾಗ್ಯನಗರ ನೂತನ ಗೋಪುರ ಕಳಸಾರೋಹಣ- ಜಾತ್ರಾಮಹೋತ್ಸವ

ಕೊಪ್ಪಳ,ಆ,೧೩: ಭಾಗ್ಯನಗರದ ಶ್ರೀಗುರು ಬಸವೇಶ್ವರ ದೇವಸ್ಥಾನ ಮಹಿಳಾ ಮಂಡಳ ವತಿಯಿಂದ ೧೪-೦೮-೧೩ ಬುಧವಾರ ಬೆಳಿಗ್ಗೆ ೮-ಗಂಟೆಗೆ ಪೂರ್ಣ ಕುಂಭ ಮತ್ತು ಆರತಿಯೊಂದಿಗೆ ನೂತನ ಕಳಸದ ಮೆರವಣಿಗೆಯು ಶ್ರೀ ತಾಯಮ್ಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀಗುರು ಬಸವೇಶ್ವರ ದೇವಸ್ಥಾನ ಪ್ರವೇಶಿಸುವದರೋಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ.  ದಿ.೧೫-೦೮-೨೦೧೩  ಗುರುವಾರ ಬೆಳಿಗ್ಗೆ ೧೧-೦೦ ಗಂಟೆಗೆ ಉಭಯ ಶ್ರೀಗಳಿಂದ ನೂತನ ಗೋಪುರ  ಕಳಸಾರೋಹಣ ಹಾಗೂ ನವಗ್ರಹ ಮಂಟಪದ ಕಳಸಾರೋಹಣ ಕಾರ್ಯಕ್ರಮಗಳು ನೆರವೇರುವವು.  ನಂತರ ಬೆಳಿಗ್ಗೆ ೧೧.೩೦ರಿಂದ ಪ್ರಾರಂಭವಾಗುವ ಈ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಮುಂಡರಗಿಯ ಸಂಸ್ಥಾನ ಮಠದ ಡಾ|| ಶ್ರೀಅನ್ನದಾನೇಶ್ವರ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಆರಾಧ್ಯದೈವ ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.  
  ಗೌರವಾನ್ವಿತ ಆಹ್ವಾನಿತರಾಗಿ ಲೋಕಸಭಾ ಸದಸ್ಯ ಶಿವರಾಮೇಗೌಡರು, ಶಾಸಕರಾದ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ವನಿತಾ ಗಡಾದ, ತಾ.ಪಂ. ಸದಸ್ಯರಾದ ದಾನಪ್ಪ ಕವಲೂರ, ಶ್ರೀನಿವಾಸ ಹ್ಯಾಟಿ, ಗ್ರಾ,ಪಂ.ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ, ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮಾ ಹೆಚ್.ನಾಯಕ, ಜಿ.ಪಂ.ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ವಾಣಿಜ್ಯೋದ್ಯಮಿಗಳಾದ ಶ್ರೀನಿವಾಸ ಗುಪ್ತಾ, ರಾಜು ಮಗಜಿ ಸೇರಿದಂತೆ ಇನ್ನಿತರು ಪಾಲ್ಗೋಳ್ಳಲಿದ್ದಾರೆ.
 ೧೬ ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ  ವಿಜಯನಾಮ ಸಂವತ್ಸರ ಶ್ರಾವಣ ಶುದ್ಧ ದಶಮಿ ಅನುರಾಧ ನಕ್ಷತ್ರದ ದಿ,೧೬-೦೮-೨೦೧೩ ಶುಕ್ರವಾರದಂದು ಬೆಳಿಗ್ಗೆ ೮-೦೦ ಗಂಟೆಗೆ ಶ್ರೀ ವೀರಭದ್ರೇಶ್ವರ ಮೂರ್ತಿಯ ಮೆರವಣಿಗೆ ನಗರದ ರಾಜ ಬೀದಿಗಳಲ್ಲಿ ಸಂಚರಿಸಿ ಗಂಗೆಗೆ ಹೋಗಿ ಬರುವುದರೊಂದಿಗೆ ಜಾತ್ರಾಮೋಹೋತ್ಸವಕ್ಕೆ ಚಾಲನೆ ದೊರೆಯಲಿದೆ. 
  ಭಾಗ್ಯನಗರ ಗ್ರಾಮದ ಶ್ರೀ ವೀರಭದ್ರೇಶ್ವರ ಸಮಾಳ ಮೇಳದವರಿಂದ ಪುರವಂತಿಕೆ ಸೇವೆ, ಸಮಾಳ ಭಾಜಾದೊಂದಿಗೆ ಸೇವಾಕಾರ್ಯಗಳು ನೆರವೇರಿದ ನಂತರ ಅಗ್ನಿಪ್ರವೇಶಿಸಿ ಗುಡಿ ತುಂಬುವುದು.
  ಈ ನೂತನ ಗೋಪುರ ಕಳಸಾರೋಹಣ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಭಕ್ತಾಧಿಗಳೆಲ್ಲರು ಆಗಮಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು ಶ್ರೀಗುರು ಬಸವೇಶ್ವರ ದೇವಸ್ಥಾನ ಟ್ರಸ್ಟ ಕಮೀಟಿ ಮತ್ತು ಶ್ರೀ ಗುರು ಬಸವೇಶ್ವರ ಯುವಕ ಮಂಡಳ ಹಾಗೂ ಮಹಿಳಾ ಮಂಡಳ  ಭಾಗ್ಯನಗರದ ಗುರು ಹಿರಿಯರು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದಾರೆ. 

Leave a Reply