ನಗರಸಭೆ ಅಧ್ಯಕ್ಷರಿಂದ ೨೭ನೇ ವಾರ್ಡ್‌ನ ನಗರೋತ್ಥಾನ ಕಾಮಗಾರಿಗೆ ಚಾಲನೆ

ಕೊಪ್ಪಳ ನಗರದ ೨೭ನೇ ವಾರ್ಡ್‌ನ ಬಿಟಿ ಪಾಟೀಲ್ ನಗರದ ಕುಷ್ಟಗಿ ರೈಲ್ವೆ ಗೇಟಿನ ಹತ್ತಿರ ಇಂದು ಮುಂಜಾನೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಚರಂಡಿ ಕಾಮಗಾರಿಗೆ ನಗರ ಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್ ಚಾಲನೆ ನೀಡಿದರು.

ಚಾಲನೆ ನೀಡಿದ ಅವರು, ಸ್ಥಳದಲ್ಲಿಯೇ ಉಪಸ್ಥಿತರಿದ್ದ ಕಾಮಗಾರಿಗೆ ಸಂಬಂದ ಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಾಮಗಾರಿಯನ್ನು ಒಳ್ಳೆಯ ಗುಣಮಟ್ಟದ ಹಾಗೂ ತೀವ್ರ ಗತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಕಾಮಗಾರಿಯನ್ನು ಕೈಗೊಳ್ಳಲು ಆದೇಶಿಸಿದರು. 
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರಸಭೆಯ ಮಾಜಿ ಅಧ್ಯಕ್ಷ ಸುರೇಶ ದೇಸಾಯಿ, ವಾರ್ಡ್‌ನ ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಸಭೆ ಸದಸ್ಯ ಮಹೇಶ ಭಜಂತ್ರಿ, ಗುತ್ತಿಗೆದಾರ ವರ್ಮ, ಶಿವಾಜಿ ಜಾದವ್ ಹಾಗೂ ಅಭಿಯಂತರರಾದ ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು. 

Leave a Reply