ವಿದ್ಯಾವಿಕಾಸ ಶಾಲೆ ೨೨ನೇ ಶಾಲಾವಾರ್ಷಿಕೋತ್ಸವ ಸಮಾರಂಭ

ಕೊಪ್ಪಳ: ಸೋಮವಾರದಂದು ಗಣರಾಜ್ಯೋತ್ಸವ ಮತ್ತು ಶಾ

ಲಾ ವಾರ್ಷಿಕೋತ್ಸವ ಆಚರಿಸಲಾಯಿತು  ಇಂದು ಬೆಳಿಗ್ಗೆ ೭.೩೦ ಗಂಟೆಗೆ ದ್ವಜಾರೋಹಣವನ್ನು   ಲಕ್ಷ್ಮಣ ಸಾ ನಿರಂಜನ್ ನಿರ್ದೇಶಕರು ವಿ.ವಿ.ಸಿ. ಸಂಸ್ಥೆ ನೆರವೆರಿಸಿದರು ಈ ದ್ವಜಾ ರೋಹಣದ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಭಾಗವಹಿಸಿದ್ದರು ಹಾಗೆ ಶಾಲಾ ವಾರ್ಷಿಕೋತ್ಸವ ನಿಮಿತ್ಯ ನಡೆದ ಕಾರ್ಯಕ್ರ್ರಮದಲ್ಲಿ ಅಧ್ಯಕ್ಷತೆಯನ್ನು   ಶ್ರೀನಿವಾಸ ಗುಪ್ತಾ ವಹಿಸಿದ್ದರು, ಉದ್ಘಾಟನೆಯನ್ನು  ಎಚ್.ಎಲ್. ಹಿರೇಗೌಡ್ರು ಮಾಜಿ ಜಿ.ಫ.ಸದಸ್ಯರು ಕೊಪ್ಪಳ ನೆರೆವೆರಿಸಿ ಹಿತನುಡಿಗಳನ್ನು ಹೇಳಿದರು. ಪ್ರಸ್ತಾವಿಕತೆಯನ್ನು ಶಾಲಾ ಅಧ್ಯಕ್ಷರಾದ ರಾಘವೇಂದ್ರ ಫಾನಘಂಟಿಯವರು ನೆರವೆರಿಸಿದರು, ವಾರ್ಷಿಕ ವರಧಿ ವಾಚನವನ್ನು  ಹೆಚ್.ಕೆ.ನಿರಂಜನ್ ನೆರವೆರಿಸಿಕೊಟ್ಟರು ಈ ಕಾರ್ಯಕ್ರಮಕ್ಕೆ ಮುಖ್ಯತಿಥಿಗಳಾಗಿ ಶ್ರೀನಿವಾಸ ಹ್ಯಾಟಿ ತಾ.ಪಂ ಸದಸ್ಯರು ಭಾಗ್ಯನಗರ, ಮಲ್ಲಿಕಾರ್ಜುನ ಚೌಕಿಮಠ ಭಾರತ್ ಸ್ಕೌಡ್ಸ್ & ಗೈಡ್ಸ್ ಜಿಲ್ಲಾಪ್ರಧಾನ ಕಾರ್ಯದರ್ಶೀಗಳು ಕೊಪ್ಪಳ,ವೀರಣ್ಣ ಅಕ್ಕಸಾಲಿ ಆಗಮಿಸಿ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರಗಳನ್ನು ನೀಡಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೆರಿಸಿದರು ಈ ಎಲ್ಲಾ ಕಾರ್ಯಕ್ರಮಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು, ಶಿಕ್ಷಕರು, ವಿಧ್ಯಾರ್ಥಿಗಳು, ಪಾಲಕರು ಶಾಲಾ ಆಡಳಿತ ಅಧೀಕಾರಿಯಾದ ಶ್ರೀ ವಾಧಿರಾಜ ದೇಸಾಯಿ  ಉಪಸ್ಥಿತಿಯಿದ್ದು ಕಾರ್ಯಕ್ರಮ ತುಂಬಾ ವಿಜೃಂಬಣೆಯಿಂದ ನೆರೆವೆರಿತು .

Please follow and like us:

Related posts

Leave a Comment