ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೭ ನೇ ಸ್ವಾತಂತ್ರ್ಯ ದಿನಾಚರಣೆ.

ಕೊಪ್ಪಳ : ಕೊಪ್ಪಳ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೬೭ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಸಂಸ್ಥೆಯ ಕಾರ್ಯದರ್ಶಿ   ಆರ್.ಹೆಚ್.ಅತ್ತನೂರ ನೆರವೇರಿಸಿದರು. ಈ ಒಂದು  ಸಂದರ್ಭದಲ್ಲಿ ಪಾಲಕರಾದ ಯಲ್ಲಪ್ಪ ಚೌಡ್ಕಿ ಶಂಕ್ರಪ್ಪ ಕುರಿ, ಮಂಜುನಾಥ ಸಜ್ಜನ, ಸರ್ಫರಾಜ ಅಡ್ಡೆವಾಲೆ, ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು. 
ಕಾರ್ಯಕ್ರಮದ ಮೊದಲಿಗೆ ಮಹಾತ್ಮಗಾಂಧಿಜೀಯವರ ಭಾವಚಿತ್ರಕ್ಕೆ ಶ್ರೀಮತಿ  ರೇಣುಕಾ.ಹೆಚ್. ಅತ್ತನೂರ ರವರು ಪೂಜೆ ನೆರವೆರಿಸಿದರು. ನಂತರ ಮಕ್ಕಳು ಊರಿನ ಪ್ರಮುಖ ಬೀದಿಗಳಲ್ಲಿ ಪ್ರಭಾತ್‌ಪೇರಿಯಲ್ಲಿ ಘೋಷಣೆಗಳನ್ನು ಕುಗುತ್ತಾ ನಡೆದರು ನಂತರ ಮಕ್ಕಳು ಮತ್ತು ಶಿಕ್ಷಕ/ ಕಿಯರು ಭಾಷಣ ಮಾಡಿದರು ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. 
ಕಾರ್ಯಕ್ರಮದ ನಿರೂಪಣೆಯನ್ನು ಆಶಾ ದೊಡ್ಡಮನಿ ಯವರು ಮಾಡಿದರು. ಸ್ವಾಗತ ರೇವಯ್ಯ ಮರಳಯ್ಯನವರು ಕೊನೆಯಲ್ಲಿ ಶ್ರೀಮತಿ ಜಯಶ್ರೀ ಕುಲಕರ್ಣಿ ವಂದಿಸಿದರು.    

Leave a Reply