ಚುಕ್ಕಿಚಿತ್ರ ಕಲಾವಿದ ವೀರೇಶ ಮ್ಯಾಗಳೇಶಿಗೆ ಸನ್ಮಾನ

ಇತ್ತೀಚಿಗೆ ಕೊಪ್ಪಳ ಶ್ರೀ ಗವಿಮಠದ ಆವರಣದಲ್ಲಿರುವ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮೈದಾನದಲ್ಲಿ  ನಡೆದ  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ದಿನದ ಕಾರ್ಯಕ್ರಮದಲ್ಲಿ  ಚುಕ್ಕಿಚಿತ್ರ ಕಲಾವಿದ ವೀರೇಶ ಮ್ಯಾಗಳೇಶಿ ಮಂಗಳೂರು ಅವರನ್ನು  ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಕೆ.ಬಿ.ಬ್ಯಾಳಿ, ಹಿರಿಯ ವೈದ್ಯ ಡಾ: ಕೆ.ಜಿ.ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಪತ್ರಕರ್ತ ಸ.ಶರಣಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೦೦ ಕ್ಕೂ ಅಧಿಕ ಸಾಧಕರಿಗೆ ಸನ್ಮಾನಿಸಲಾಯಿತು. 

Leave a Reply