ಬಿಹಾರ್ ಬೋಧಗಯಾ ಬಾಂಬ್ ಸ್ಪೋಟ ಖಂಡನಾರ್ಹ

ಅಹಿಂಸೋ ಪರಮಧರ್ಮ ಎಂದು ಸಾರಿದ ಬುದ್ಧನ ಬಿಹಾರದ ಮಂದಿರದಲ್ಲಿ ಬಾಂಬ್ ಸ್ಪೋಟ್ ಮಾಡಿದ ಭಯೋತ್ಪಾದಕರ ವರ್ತನೆ ಖಂಡನೀಯ. ಧರ್ಮ ಧರ್ಮಗಳ ಸಂಘರ್ಷದ ಮೂಲಕ ಇಡೀ ಮಾನವ ಕುಲವನ್ನೇ ನಾಶ ಮಾಡುವ ರೀತಿಯಲ್ಲಿ ಭಯೋತ್ಪಾದಕರು ವರ್ತಿಸುತ್ತಿರುವುದು  ನಾಗರಿಕ ಸಮಾಜದ ಕಳಂಕ. ಇಂಥ ಕೃತ್ಯಗಳನ್ನು  ಮುಂಚಿತವಾಗಿಯೇ ಗುಪ್ತದಳದ ಮೂಲಕ ತಿಳಿದು ಅದನ್ನು ನಿಯಂತ್ರಿಸುವುದು ಸರ್ಕಾರದ ಕರ್ತವ್ಯ. ಇದು ಸರ್ಕಾರದ ವಿಫಲತೆಯನ್ನು ಮತ್ತು ಭಯೋತ್ಪಾದಕರ ವಿಕೃತತೆಯನ್ನು ಒಟ್ಟಿಗೆ ಬಿಂಬಿಸುತ್ತಿದೆ.
ಈ ರೀತಿಯ ಭಯೋತ್ಪಾದಕರನ್ನು ನಿರ್ದಾಕ್ಷಿಣ್ಯವಾಗಿ ಸರ್ಕಾರ ನಿಯಂತ್ರಿಸುವಲ್ಲಿ ಕಾರ್‍ಯಪ್ರವೃತ್ತವಾಗಬೇಕು. ಅವರ ಈ ಕೃತ್ಯದಿಂದ ಸಾಧಿಸಿದ್ದೇನು? ಜನರಲ್ಲಿ ಭಯಭೀತಿ ಹುಟ್ಟಿಸುವುದು ರಾಷ್ಟ್ರೀಯ ಸಂಪನ್ಮೂಲ ನಾಶಗೊಳಿಸುವುದು ಕೊನೆಗೆ ಅದರಲ್ಲಿಯೇ ತಾವೂ ಕೂಡ ಬಲಿಯಾಗುವುದು. ಇದರಿಂದ ಯಾವುದೇ ಸಮಾಜಕ್ಕೆ ಹಿತವಿಲ್ಲ. ಇಂಥ ಭಯೋತ್ಪಾದಕ ಕೃತ್ಯವನ್ನು ಪಿಯೂಸಿಇಎಲ್ ಜಿಲ್ಲಾ ಘಟಕ,ಕೊಪ್ಪಳ ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ. 

Leave a Reply