fbpx

ರಾಜಾ ಬಾಗವರ ವಾಣಿಜ್ಯ ಸಂಕೀರ್ಣಕ್ಕೆ ಶಾಸಕರಿಂದ ಚಾಲನೆ

ಕೊಪ್ಪಳ : ದಿ ೨೭  ರಂದು ಬೆಳಗ್ಗೆ ೧೧:೦೦ ಗಂಟೆಗೆ ನಗರದ ಹಜರತ್ ರಾಜಾ ಬಾಗವರ ಧರ್ಗಾದ ೭೦ ಲಕ್ಷದ ವಾಣಿಜ್ಯ ಸಂಕೀರ್ಣಕ್ಕೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಶಂಕು ಸ್ಥಾಪನೆ ನೆರವೇರಿಸಿದರು. 
ಈ ಸಂಧರ್ಬದಲ್ಲಿ ಮಾಜಿ ಶಾಸಕರಾದ ಸಂಗಣ್ಣ ಕರಡಿ, ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಧರ್ಮ ಗುರುಗಳಾದ ನಜೀರ್ ಅಹ್ಮದ ತಸ್ಕಿನ, ಮಹಮ್ಮದ ತೈಸೀನ್ ತಸ್ಕೀನ್, ಲತಾ ವೀರಣ್ಣ ಸೊಂಡೂರ, ಅಮ್ಜದ ಪಟೇಲ್, ಖಾಟನ ಪಾಷಾ, ಮೌಲಾ ಹುಸೇನ್ ಜಮಾದಾರ್, ಸೈಯದ್ ಸಲೀಂ ಸಾಬ್, ಖಾಜಾ ಹುಸೇನ್ ಬನ್ನಿಕೊಪ್ಪ, ವಾಯಿದ್ ಸೊಂಪೂರ, ದರ್ಗಾ ಕಮೀಟಿಯ ಅಧ್ಯಕ್ಷರಾದ ಮಹಮ್ಮದ್ ಜಿಲಾನ್, ಹಾಗೂ ಸರ್ವ ಸದಸ್ಯರು, ಕಲಾಲ್ ಸಮಾಜದ ಗುರು ಹಿರಿಯರು ಹಾಗೂ ಮಾನ್ವಿ ಪಾಷಾ, ದಾರವಾಡ ರಫಿ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು. 

ಒಗ್ಗಟ್ಟಿನಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ – ಕೆ.ರಾಘವೇಂದ್ರ ಹಿಟ್ನಾಳ 

ಕೊಪ್ಪಳ : ೨೭. ನಗರದ ಹೃದಯಭಾಗದಲ್ಲಿರುವ ಹಜರತ್ ರಾಜಾ ಬಾಗಸವಾರ ದರ್ಗಾ ಸಂಕೀರ್ಣದ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳರವರು ಯಾವುದೇ ಸಮಾಜದ ಏಳಿಗೆಯೂ ಆ ಸಮುದಾಯದ ಯುವಕರಲ್ಲಿ ಹಾಗೂ ಹಿರಿಯರಲ್ಲಿ ಒಗ್ಗಟ್ಟಿನ ಸಾಮರಸ್ಯವಿದ್ದರೆ ಮಾತ್ರ ಅಂತ ಸಮಾಜದ ಏಳಿಗೆ ಸಾಧ್ಯ ಆದ್ದರಿಂದ ಪ್ರತಿಯೊಬ್ಬ ಸಮುದಾಯದವರು ಸಮಾಜದ ಏಳಿಗೆಗಾಗಿ ಒಗ್ಗಟ್ಟಿನ ಬಲ ಪ್ರದರ್ಶಿಸಿ ಸರಕಾರದ ಅನೇಕ ಜನ ಪರ ಯೋಜನೆಗಳನ್ನು ಪಡೆದುಕೊಂಡು ಮುಂದಿನ ಭವಿಷ್ಯಕ್ಕಾಗಿ ಶ್ರಮಿಸಬೇಕು ಹಜರತ್ ರಾಜಾ ಬಾಗಸವಾರ ದರ್ಗಾದ ಯುವ ಸದಸ್ಯರ ಕಾರ್ಯವನ್ನು ಶ್ಲಾಘಿಸಿ ಸುಮಾರು ೭೦-೮೦ ವರ್ಷಗಳಿಂದ ಕಾಲಿಬಿದ್ದಿ ಈ ಜಾಗೆಗೆ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡುವ ಬಲವಾದ ಗುರಿಯನ್ನು ಹೊಂದಿ ಇದನ್ನು ಸಾಧಿಸಿರುವುದು ಸಮಾಜದ ಎಲ್ಲಾ ಜನರು ಪ್ರಶಂಸಿನೀಯ ಕಾರ್ಯವಾಗಿದೆ. ಯಾವುದೇ ಅಡೆ ತಡೆಗಳು ಬಂದರು ಬಲವಾಗಿ ಎದುರಿಸಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿರುವುದು. ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂಧರ್ಬದಲ್ಲಿ ಮಾಜಿ ಶಾಸಕರಾದ ಸಂಗಣ್ಣ ಕರಡಿ, ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಧರ್ಮ ಗುರುಗಳಾದ ನಜೀರ್ ಅಹ್ಮದ ತಸ್ಕಿನ, ಮಹಮ್ಮದ ತೈಸೀನ್ ತಸ್ಕೀನ್, ಲತಾ ವೀರಣ್ಣ ಸೊಂಡೂರ, ಅಮ್ಜದ ಪಟೇಲ್, ಖಾಟನ ಪಾಷಾ, ಮೌಲಾ ಹುಸೇನ್ ಜಮಾದಾರ್, ಸೈಯದ್ ಸಲೀಂ ಸಾಬ್, ಖಾಜಾ ಹುಸೇನ್ ಬನ್ನಿಕೊಪ್ಪ, ವಾಯಿದ್ ಸೊಂಪೂರ, ದರ್ಗಾ ಕಮೀಟಿಯ ಅಧ್ಯಕ್ಷರಾದ ಮಹಮ್ಮದ್ ಜಿಲಾನ್, ಹಾಗೂ ಸರ್ವ ಸದಸ್ಯರು, ಕಲಾಲ್ ಸಮಾಜದ ಗುರು ಹಿರಿಯರು ಹಾಗೂ ಮಾನ್ವಿ ಪಾಷಾ, ದಾರವಾಡ ರಫಿ, ಅಬ್ದುಲ ಅಜೀಜ ಮಾನ್ವಿ, ಅಕ್ಬರ ಪಾಷಾ ಪಲ್ಟನ್, ನಾಸೀರಹುಸೇನ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂಧಿಸಿದರು  

Please follow and like us:
error

Leave a Reply

error: Content is protected !!