ಕಸಾಪ ಚುನಾವಣೆ ಭಾನುವಾರ ಮತದಾನ ಯಾರಿಗೆ ಒಲಿಯುತ್ತೆ ಅದೃಷ್ಟ ಲಕ್ಷ್ಮಿ …?

ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್’ಗೆ ಇದೇ ಭಾನುವಾರ, ಫೆಬ್ರವರಿ 28ರಂದು ಚುನಾವಣೆ ನಡೆಯಲಿದೆ. ಕಸಾಪ ಅಧ್ಯಕ್ಷ ಸ್ಥಾನ ಸೇರಿ ಸೆರಿದಂತೆ ಒಟ್ಟು 30 ಜಿಲ್ಲಾಧ್ಯಕ್ಷ ಸ್ಥಾನಗಳು ಹಾಗೂ 6 ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡ್ತಿದ್ದಾರೆ. ಇನ್ನು ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಗಡಿನಾಡ ಘಟಕಗಳ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳೂ ಸಹ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಇನ್ನು ಚುನಾವಣೆ ನಡೆಯುವ ದಿನದಂದೇ ಜಿಲ್ಲಾಧ್ಯಕ್ಷರ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಂಚೆ ಮತಗಳ ಎಣಿಕೆ ಬಳಿಕ ಮಾರ್ಚ್ 2 ರಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟಿಸಲಾಗುತ್ತದೆ. ನೂತನ ಅಧ್ಯಕ್ಷರು ಆಗೋರು ಕಸಾಪದ 25ನೇ ಅಧ್ಯಕ್ಷರಾಗಲಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಕಸಾಪ ಚುನಾವಣೆಯೂ ಇತರೇ ಚುನಾವಣೆಯಂತೆಯೇ ಕಾವು ಹೆಚ್ಚಿಸಿರೋದಂತೂ ಹೌದು.

Please follow and like us:
error