fbpx

ಫೆಬ್ರುವರಿ ೦೨-೨೦೧೫ ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ

ರಾಜ್ಯಾದಾಧ್ಯಂತ ಸರಕಾರಿ ಪದವಿ ಕಾಲೇಜುಗಳ ತರಗತಿಗಳನ್ನು ಹಿಷ್ಕರಿಸಿ  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಫೆಬ್ರುವರಿ ೦೨-೨೦೧೫ ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ 
ಕೊಪ್ಪಳ: ರಾಜ್ಯಾದಾಧ್ಯಂತ ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸುಮಾರು ೧೦-೧೫ ವರ್ಷಗಳಿಂದ ಸೇವೆ ಸಲ್ಲಿಸಿ ವಯೋಮಿತಿ ಮೀರಿ ಅರ್ಜಿ ಹಾಕಲುಕೂಡ ಅವಕಾಶವಿಲ್ಲದಂತಾಗಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಸರಕಾರವು ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿ ಅತಿಥಿ ಉಪನ್ಯಾಸಕರನ್ನು ಸಂಸಾರ ಸಮೇತ ಬೀದಿಗೆ ತಳ್ಳಿದೆ. ಈ ಹಿಂದೆ ೨೦೦೯ನೇ ವರ್ಷದಲ್ಲ್ಲಿ ನೇಮಕಾತಿ ಹೊಂದಿದ ಉಪನ್ಯಾಸಕರು ಅತಿಥಿ ಹಾಗೂ ಅರೆಕಾಲಿಕರಾಗಿ ಸೇವೆ ಸಲ್ಲಿಸಿದಂತಹ ವೇಳೆಯಲ್ಲಿ ಸರಕಾರವು ಅತಿಥಿ/ಅರೆಕಾಲಿಕ ಎರಡು ಒಂದೇ ಎಂದು ಪರಿಗಣಿಸಿ ವರ್ಷದ ಸೇವೆಗೆ ಕೃಪಾಂಕ ೧ ರಂತೆ ಹಾಗೂ ೧ ವರ್ಷದ ಸೇವೆಗೆ ೧ ವರ್ಷ ವಯೋಮಿತಿ ಸಡಿಲಿಕೆಯಂತೆ  ಗರಿಷ್ಟ  ಐದು ವರ್ಷಗಳವರೆಗೆ, ವಿನಾಯಿತಿ ಸೌಲಭ್ಯ ನೀಡಿ ಸರಕಾರವು ನೇಮಕಾತಿ ಮಾಡಿಕೊಂಡಿದೆ. 
 ಇದಲ್ಲದೇ ವಿವಿಧ ಶೈಕ್ಷಣಿಕ ಇಲಾಖೆಗೆಗಳಿಗೆ ಸಂಭಂದಿಸಿದಂತೆ ಮೂರಾರ್ಜಿ ದೇಸಾಯಿ ಶಾಲೆಗಳ ಶಿಕ್ಷಕರ ನೇಮಕಾತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜೆ.ಒ.ಸಿ ವಿಭಾಗದಲ್ಲಿ ೨೦೦೩ರ ಅರೆಕಾಲಿಕ ಉಪನ್ಯಾಸಕರ ನೇಮಕಾತಿ ಹಾಗು ಇನ್ನಿತರ ಇಲಾಖೆಗಳಲ್ಲಿ ಕೃಪಾಂಕ, ವಯೋಮಿತಿ ಸಡಿಲಿಕೆ ಹಾಗು ಸೇವಾ ಜೇಷ್ಠತೆ ಆಧಾರ ಮೇಲೆ ಸರಕಾರ ನೇಮಕಾತಿಯನ್ನು ಹಾಗು ಸೇವಾ ವಿಲೀನತೆಯನ್ನು ಮಾಡಿಕೊಂಡಿದೆ. ಇವು ಯಾವ ಸೌಲಭ್ಯವು ಅತಿಥಿ ಉಪನ್ಯಾಸಕರುಗಳಿಗೆ ನೀಡದೇ ನೇಮಕಾತಿ ಹೊರಡಿಸಿರುವದು ದೌರ್ಭಾಗ್ಯವಾಗಿದೆ.
ಈ ಎಲ್ಲಾ ಸಮಸ್ಯಗಳ ಪರಿಹಾರಾರ್ಥವಾಗಿ ಅತಿಥಿ ಉಪನ್ಯಾಸಕರುಗಳು ಸರಕಾರಕ್ಕೆ ಮನದಟ್ಟಾಗುವಂತೆ ಹೋರಾಟ, ಸಮಾವೇಶ, ಪ್ರತಿಭಟನೆ ಮುಂತಾದವುಗಳ ಮೂಲಕ ಮನವಿ ಮಾಡಿಕೊಳ್ಳಲಾಗಿದ್ದರೂ ಸರಕಾರವು ಇದಾವುದಕ್ಕೂ ಸರಿಯಾಗಿ ಸ್ಪಂದಿಸದ ಕಾರಣ ಅಂತಿಮವಾಗಿ ರಾಜ್ಯದಾದ್ಯಂತ ತರಗತಿಗಳನ್ನು ಭಹಿಷ್ಕರಿಸಿ ಅನಿರ್ಧಿಷ್ಟ ಅವಧಿ ಉಪವಾಸ ಸತ್ಯಾಗ್ರಹವನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪೆಭ್ರವರಿ ೨-೨೦೧೫ ರಿಂದ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಎಸ್.ಎಫ್.ಐ, ಡಿ.ವೈ.ಎಫ್.ಐ, ಎ.ಬಿ.ವಿ.ಪಿ ಮತ್ತಿತರ ಸಂಘಟನೆಗಳು ಬೆಂಬಲ ನೀಡಿವೆ.
ಈ ಕಾರಣಕ್ಕಾಗಿ ಜಿಲ್ಲಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಫೆಬ್ರವರಿ ೨ ರಂದು ಬೆಂಗಳೂರಿನಲ್ಲಿ ನಡೆಯುವ ಅನಿರ್ಧಾಷ್ಟವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲು ದಿನಾಂಕ ೧-ಫೆಬ್ರವರಿ ೨೦೧೫ ರಂದು ಕೊಪ್ಪಳ ರೈಲು ನಿಲ್ದಾಣದಿಂದ ಸಂಜೆ ಹೊರಡುವ ಹಂಪಿ ಎಕ್ಸಪ್ರಕ್ಸ್ ಮೂಲಕ ಬೆಂಗಳೂರಿಗೆ ತೆರಳಾಗುವದು. ಅಂದು  ರೈಲು ಹೊರಡುವ ೨  ಗಂಟೆ ಮುಂಚಿತವಾಗಿ ಉಚಿತ ಪಾಸುಗಳನ್ನು ಪಡೆದು ಕೊಳ್ಳಲು ಕೊಪ್ಪಳ ಜಿಲ್ಲಾ ಅರೆಕಾಲಿಕ/ ಅತಿಥಿ ಉಪನ್ಯಾಸಕರ ಸಂಘ(ರಿ) ಅಧ್ಯಕ್ಷ ಹಾಗು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರಾದ ವೀರಣ್ಣ .ಎಸ್ ಸಜ್ಜನgರ  ತಿಳಿಸಿದ್ದಾರೆ.  ಮಾಹಿತಿಗಾಗಿ ಮೊ. ೯೪೪೯೨೧೦೯೩೮ ಸಂಪರ್ಕಿಸಿರಿ
Please follow and like us:
error

Leave a Reply

error: Content is protected !!