ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕ : ಅರ್ಜಿ ಆಹ್ವಾನ

  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ನಿರ್ಭಯ ಕೇಂದ್ರ/ಮಹಿಳಾ ವಿಶೇಷ ಚಿಕಿತ್ಸಾ ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಹುದ್ದೆಗಳಾದ ಸಮಾಲೋಚಕರು (೦೧) ಎಂ.ಎ. (ಮನೋವಿಜ್ಞಾನ) ಅಥವಾ ಎಂಎಸ್‌ಡಬ್ಲ್ಯೂ/ಎಲ್‌ಎಲ್‌ಬಿ ವಿದ್ಯಾರ್ಹತೆ ಹೊಂದಿ ೦೫ ವರ್ಷ ಅನುಭವ ಇರಬೇಕು. ಮಾಸಿಕ ವೇತನ ರೂ.೧೦,೦೦೦/- ನೀಡಲಾಗುವುದು, ಸಮಾಜ ಕಾರ್ಯಕರ್ತ (೦೩), ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆ ಹೊಂದಿ ೦೫ ವರ್ಷ ಅನುಭವ ಇರಬೇಕು.  ಮಾಸಿಕ ವೇತನ ರೂ.೬,೦೦೦/- ನೀಡಲಾಗುವುದು, ಸ್ವೀಫರ್/ಕ್ಲಿನರ್ (೦೧), ಎಸ್‌ಎಸ್‌ಎಲ್‌ಸಿ/ಪಿಯುಸಿ ವಿದ್ಯಾರ್ಹತೆ ಹೊಂದಿ ೦೩ ವರ್ಷ ಅನುಭವ ಇರಬೇಕು.  ಮಾಸಿಕ ವೇತನ ರೂ.೪,೦೦೦/- ನೀಡಲಾಗುವುದು. ಎಲ್ಲಾ ಹುದ್ದೆಗಳಿಗೆ ೨೫ ರಿಂದ ೩೫ ವರ್ಷ ವಯೋಮಿತಿಯವರಿಗೆ ಅವಕಾಶವಿರುತ್ತದೆ.
  ಸಮಾಲೋಚಕರ ಹುದ್ದೆಯು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ. ಗೌರವಧನ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಯು ಅರೆಕಾಲಿಕ ಹಾಗೂ ತಾತ್ಕಾಲಿಕ ಆಧಾರದ ಹುದ್ದೆಯಾಗಿದ್ದು ಯಾವುದೇ ಕಾರಣಕ್ಕೂ ಸಕ್ರಮಗೊಳಿಸುವುದಿಲ್ಲ. ನೇಮಕಗೊಂಡ ಸಿಬ್ಬಂದಿಗಳ ಸೇವೆಯು ಸರ್ಕಾರದ ಅನುದಾನದ ಲಭ್ಯತೆಯ ಆಧಾರದ ಮೇಲಿರುತ್ತದೆ. ಕನಿಷ್ಠ ಅರ್ಹತೆಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಗೆ ಆದ್ಯತೆ ಇರುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಎಲ್ಲಾ ದಾಖಲೆಗಳೊಂದಿಗೆ ಡಿ.೦೫ ರೊಳಗಾಗಿ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು  ತಿಳಿಸಿದ್ದಾರೆ.
Please follow and like us:

Leave a Reply