ವಿಜೃಂಭಣೆಯಿಂದ ಜರುಗಿದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

 ಯಲಬುರ್ಗಾ : ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
ಡೊಳ್ಳು, ಮಜಲು ಕುಣಿತದೊಂದಿಗೆ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಪಲ್ಲಕ್ಕಿಯನ್ನು ದೇವಸ್ಥಾನದಿಂದ ಗಂಗೆ ಸ್ಥಾನಕ್ಕೆ ಕರೆದ್ಯೋಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕಿ ಉತ್ಸವ ನಡೆಯಿತು. ಉತ್ಸವದಲ್ಲಿ ಮಹಿಳೆಯರಿಂದ ಕುಂಭ ಸೇವೆಗಳೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಜರುಗಿತು. 
            ಹಾಲಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಜಿಪಂ ಸದಸ್ಯ ರಾಮಣ್ಣ ಸಾಲಭಾವಿ, ಜಿಪಂ ಮಾಜಿ ಸದಸ್ಯ ಸಿ,ಎಚ್,ಪೋಲಿಸಪಾಟೀಲ, ಮಾಜಿ ತಾ.ಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡರಾದ ಈಶ್ವರ ಅಟಮಾಳಗಿ, ರೇವಣೆಪ್ಪ ಹಿರೇಕುರುಬರ, ಎಸ್.ಕೆ.ದಾನಕೈ. ಬಸವರಾಜ ಒಂಟೆಲಿ, ಶಿವಣ್ಣ ರಾಜೂರು, ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು. 
Please follow and like us:
error