ವರ್ಷಾಂತ್ಯದೊಳಗೆ ಕೇಬಲ್ ಟಿ.ವಿ ಡಿಜಿಟೈಜೇಶನ್ ಕಡ್ಡಾಯ ಡಿ.ಸಿ. ಪ್ರವೀಣಕುಮಾರ್.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‌ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ೨೦೧೫ ರ ಡಿಸೆಂಬರ್ ೩೧ ರೊಳಗಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್‌ಗೊಳಿಸುವಂತೆ ಪ್ರಭಾರಿ ಜಿಲ್ಲಾಧಿಕಾರಿ ಡಾ
     ಕೇಬಲ್ ಟಿ.ವಿ. ಡಿಜಿಟೈಜೇಶನ್ ಸಂಬಂಧ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಕೇಬಲ್ ಆಪರೇಟರ್‍ಸ್‌ಗಳೊಂದಿಗಿನ ಸಭೆಯಲ್ಲಿ ಈ ಸೂಚನೆ ನೀಡಿದರು.
     ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ಡಿಜಿಟೈಜೇಶನ್ ಗೊಳಿಸುವಂತೆ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ.  ಇದರ ಅನ್ವಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೇಬಲ್ ಟಿ.ವಿ. ವೀಕ್ಷಕರು ಸದ್ಯ ಅನಲಾಗ್ ಮೋಡ್‌ನಲ್ಲಿರುವ ಪ್ರಸಾರ ವ್ಯವಸ್ಥೆಯನ್ನು ೨೦೧೫ ರ ಡಿಸೆಂಬರ್ ೩೧ ರ ಒಳಗಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಡಿಜಿಟೈಜೇಶನ್‌ಗೆ ಪರಿವರ್ತನೆ ಮಾಡಿಕೊಳ್ಳಬೇಕು.  ಗ್ರಾಮೀಣ ಪ್ರದೇಶಗಳಿಗೆ ೨೦೧೬ ರ ಡಿಸೆಂಬರ್ ೩೧ ರ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್‍ಸ್‌ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್‍ಸ್‌ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು.  ಕೇಬಲ್ ಗ್ರಾಹಕರಿಗೆ ಈಗಿನಿಂದಲೇ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾರಂಭಿಸಬೇಕು.   ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಕಾಲಾವಕಾಶ ಕಡಿಮೆ ಇದೆ.  ಸೆಟ್‌ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು.  ಡಿಸೆಂಬರ್ ೩೧ ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು.   ಕೇಬಲ್ ಸೇವೆ ಸ್ಥಗಿತಗೊಂಡಲ್ಲಿ, ಕೇಬಲ್ ಆಪರೇಟರ್‍ಸ್ ಮತ್ತು ಸಂಸ್ಥೆಗಳು ಗ್ರಾಹಕರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ.   ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್‍ಸ್‌ಗಳು ಡಿಜಿಟೈಜೇಶನ್ ಅಳವಡಿಕೆಗೆ ಈಗಿನಿಂದಲೇ ಕಾರ್ಯತತ್ಪರರಾಗಬೇಕು.  ಕೇಬಲ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದೂ ಸಹ ಆಪರೇಟರ್‍ಸ್‌ಗಳ ಜವಾಬ್ದಾರಿಯಾಗಿದ್ದು, ಉತ್ತಮ ಗುಣಮಟ್ಟ ಸಿಗದಿದ್ದಲ್ಲಿ, ಚಂದಾದಾರರೂ ಸಹ ಡಿಟಿಹೆಚ್ ಸೇವೆಯತ್ತ ಮುಖ ಮಾಡುವ ಸಾಧ್ಯತೆಗಳಿರುತ್ತವೆ.  ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ದರ ನಿಗದಿ ಮಾಡುವಾಗ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಏಕರೂಪದ ದರ ನಿಗದಿ ಮಾಡಿಕೊಳ್ಳುವುದು ಸೂಕ್ತ.  ಮಕ್ಕಳ ಸಹಾಯವಾಣಿ ೧೦೯೮ ಕುರಿತು ಕೇಬಲ್ ಜಾಲದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
     ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲು ಕೇವಲ ಎರಡು ತಿಂಗಳ ಕಾಲಾವಕಾಶ ಮಾತ್ರ ಇರುವುದರಿಂದ ಅವಧಿ ವಿಸ್ತರಿಸಬೇಕು ಎಂದು ಕೇಬಲ್ ಆಪರೇಟರ್‍ಸ್‌ಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೇಬಲ್ ಟಿವಿ ಡಿಜಿಟೈಜೇಶನ್ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಕಾಲಮಿತಿ ನಿಗದಿಪಡಿಸಿದ್ದು, ಅವಧಿ ವಿಸ್ತರಿಸುವ ಅಧಿಕಾರ ಜಿಲ್ಲಾಡಳಿತಕ್ಕಿಲ್ಲ.  ಕೇಬಲ್ ಆಪರೇಟರ್‍ಸ್‌ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತಮ್ಮ ಸೇವೆಯನ್ನು ತ್ವರಿತವಾಗಿ ಮತ್ತು ಸಮರ್ಪಕವಾಗಿ ವಿಸ್ತರಿಸಿಕೊಳ್ಳಲು, ಆಪರೇಟರ್‍ಸ್‌ಗಳಿಗೆ ಅನಗತ್ಯ ತೊಂದರೆ ನೀಡದೆ, ಅಗತ್ಯ ಸಹಕಾರವನ್ನು ನೀಡುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಸರ್ಕಾರಿ ವಾಹಿನಿಗಳ ಪ್ರಸಾರ ಕಡ್ಡಾಯ : ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಷನ್ ಕಾಯ್ದೆ ಅನ್ವಯ ಕೇಬಲ್ ಟಿ.ವಿ. ಆಪರೇಟರ್‌ಗಳು ಕೆಲವು ವಾಹಿನಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕಿರುತ್ತದೆ.  ಅದರಂತೆ ದೂರದರ್ಶನ, ಕಿಸಾನ್ ವಾಹಿನಿ, ಲೋಕಸಭಾ ಮತ್ತು ರಾಜ್ಯಸಭಾ ವಾಹನಿಗಳನ್ನು ಪ್ರೈಮ್‌ಬ್ಯಾಂಡ್‌ನಲ್ಲಿ ಕಡ್ಡಾಯವಾಗಿ ಪ್ರಸಾರ ಮಾಡಬೇಕು.  ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. 
     ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಜಿಲ್ಲೆಯ ಎಲ್ಲ ಕೇಬಲ್ ಆಪರೇಟರ್‍ಸ್‌ಗಳು, ಮಲ್ಟಿ ಸಿಸ್ಟಂ ಆಪರೇಟರ್‍ಸ್‌ಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

. ಪ್ರವೀಣಕುಮಾರ್ ಜಿ.ಎಲ್. ಅವರು ಕೇಬಲ್ ಆಪರೇಟರ್‍ಸ್‌ಗಳಿಗೆ ಸೂಚನೆ ನೀಡಿದರು.

Please follow and like us:
error