ಈ ಪುಟಾಣಿ ೧೦೦ ಕ್ಕೆ ೯೭ ಅಂಕ – ಆದರ್ಶ ವಿದ್ಯಾರ್ಥಿನಿ ಪುರಸ್ಕಾರ.

ಕೊಪ್ಪಳ-25- ನಗರದ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ೩ ನೇ ಎ ತರಗತಿ ವಿದ್ಯಾರ್ಥಿನಿ ಆಪ್ರೀನ್ ಕಿಲ್ಲೆದಾರ್ ಈ ವರ್ಷದ ಆದರ್ಶ ವಿದ್ಯಾರ್ಥಿನಿ ಪುರಸ್ಕಾರಕ್ಕೆ ಬಾಜನಳಾಗಿದ್ದಾಳೆ. ಈ ಪುಟಾಣಿ ೧೦೦ ಕ್ಕೆ ೯೭ ಅಂಕ ಪಡೆದು ತರಗತಿಗೆ ಪ್ರಥಮಸ್ಥಾನದಲ್ಲಿದ್ದು, ಪಠ್ಯೆತರ ಚಟುವಟಿಕೆಗಳಾದ ೧೦೦ ಮೀ ಓಟ, ಚಿತ್ರಕಲಾ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ, ವಿದ್ಯಾರ್ಥಿನಿಯ ಸರ್ವಾಂಗೀಣ ಪ್ರಗತಿ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಈ ವಿದ್ಯಾರ್ಥಿನಿಗೆ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕವೃಂದ, ಆಡಳಿತವರ್ಗ, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error