ವಾಮಾಚಾರಕ್ಕೆ ಯತ್ನಿಸಿದ ಯುವಕ

ಕೊಪ್ಪಳ ತಾಲೂಕಿನ ಹೊಸಹಳ್ಳಿಯ ಗಾಯತ್ರಿಯನ್ನು ಬಲಿ ಪಡೆದ ವಾಮಾಚರ ಪ್ರಕರಣ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮತ್ತೊಂದು ಪ್ರಕರಣ ನಡೆದಿದೆ.ವಾಮಾಚರಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಸಾರ್ವ ಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ಕೊಪ್ಪಳದ ಶಾಶ್ತ್ರೀ ಬಡಾವಣೆಯಲ್ಲಿ ವಾಮಾಚರ ವಸ್ತುಗಳನ್ನು ಬೀಸಾಕಿ ಹೋಗುತ್ತಿದ್ದ ಪ್ರವೀಣನನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದಾರೆ. ವೈಓಂದೆಡೆ ವಾಮಾಚರಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಯುವಕನಿಗೆ ಸಖತ್ ಗೂಸಾ.ಇನ್ನೊಂದೆಡೆ ಭಯಭೀತಗೊಂಡು ನಿಂತು ಮಹಿಳೆಯರು.ಇವೆಲ್ಲಾ ದ್ರಶ್ಯಗಳು ಕಂಡು ಬಂದಿದ್ದುಕೊಪ್ಪಳದ ಶಾಶ್ತ್ರಿ ಬಡಾವಣೆಯಲ್ಲಿ.ಈ ಬಡಾವಣೆಯಲ್ಲಿ ಹುಬ್ಬಳಿ ಮೂಲದ ಪ್ರವೀಣ ಇಂದು ವಿದ್ಯುತ್ ಇಲ್ಲದ ಸಮಯ ನೋಡಿ ವಾಮಾಚರ ವಸ್ತುಗಳನ್ನು ಇಟ್ಟು ಹೋಗಲು ಯತ್ನಿಸಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಗಾಲಾಕೊಂಡಿದ್ದಾನೆ.ಬಡಾವಣೆಯಲ್ಲಿ ಕಳೆದ ಆರು ತಿಂಗಳಿಂದ ವಾಮಾಚಾರ ವಸ್ತುಗಳನ್ನು ಬೀಸಾಕಿ ಹೋಗುತ್ತಿದ್ದರು.ಇದ್ರಿಂದ ಸ್ಥಳೀಯರಲ್ಲಿ ಇನ್ನಿಲ್ಲದ ಆತಂಕ ಸ್ರಷ್ಟಿಯಾಗಿತ್ತು.ಅದರಲ್ಲೂ ನಿಧಿಗಾಗಿ ಗಾಯತ್ರಿ ಎಂಬ ಬಾಲಕಿಯನ್ನು ಬಲಿ ಪಡೆದ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ಇನ್ನು ಮಾಸಿಲ್ಲ.ಆದ್ರೆ ಇಂದು ವಾಮಾಚಾರ ವಸ್ತುಗಳನ್ನು ಇಡುತ್ತಿದ್ದ ಪ್ರವೀಣ ಕತೆಯೇ ಬೇರೆಯಾಗಿತ್ತು.ವಾಮಾಚರ ವಸ್ತುಗಳನ್ನು ಇಟ್ಟು ಹೋಗುತ್ತಿದ್ದ ಪ್ರವೀಣಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ವಾಮಾಚರಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಅವನ ಕೈಯಿಂದಲೇ ಕ್ಲೀನ್ ಮಾಡಿಸಿದ್ದಾರೆ.ಈ ಬಗ್ಗೆ ಪ್ರವೀಣನ್ನು ಕೇಳಿದರೆ ನನಗೇನು ಗೋತ್ತಿಲ್ಲ ನಮ್ಮ ಅತ್ತೆ ಪರಸಮ್ಮ ಇಟ್ಟು ಬಾ ಅಂತಾ ಹೇಳಿದ್ದಾಳೆ ಅಂತಾನೇ. ಪ್ರವೀಣ ವಾಮಾಚಾರಕ್ಕೆ ಯತ್ನಿಸಿದ ಯುವಕ
ಇನ್ನು ಕಳೆದ ಆರು ತಿಂಗಳಿಂದ ಬಡವಾಣೆಯಲ್ಲಿ ಪೋಷಕರನ್ನು ಮಕ್ಕಳು ಹೊರಗಡೆ ಬಿಡಕೆ ಹಿಂದು ಮುಂದು ನೋಡುತ್ತಿದ್ದರು.ಬಡಾವಣೆಯಲ್ಲಿ ಪ್ರತಿ ಗುರುವಾರ ರವಿವಾರ ವಾಮಾಚರ ವಸ್ತುಗಳನ್ನು ಬೀಸಾಕಿ ಹೋಗುತ್ತಿದ್ದರು.ಬಾಲಕರು ಶಾಲೆಗೆ ಹೋಗಬೇಕಾದ್ರೂ ಭಯದ ವಾತಾವರಣ ಸೃಷ್ಟಿಯಾಗಿತ್ತು.ಕಳೆದ ಆರು ತಿಂಗಳಿಂದ ಯಾರು ವಸ್ತುಗಳನ್ನು ಬೀಸಾಕಿ ಹೋಗುತ್ತಿದ್ದರು ಅನ್ನೋ ಸುಳಿವು ಕೂಡಾ ಇರಲಿಲ್ಲ.ಆದ್ರೆ ರವಿವಾರವಾಗಿದ್ರಿಂದ ವಾಮಾಚಾರ ವಸ್ತುಗಳನ್ನು ಇಟ್ಟು ಹೋಗುತ್ತಿದ್ದ ಯುವಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.ಯುವಕನಿಗೆ ಸ್ಥಳಿಯರು ಹಿಗ್ಗಾ ನುಗ್ಗಾ ಧರ್ಮದೇಟು ನೀಡಿ ಹಣ್ಣುಗಾಯಿ ನೀರಗಾಯಿ ಮಾಡಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರಣ ನಮಗೆ ಆರು ತಿಂಗಳಿಂದ ನೆಮ್ಮದಿಯೇ ಇರಲಿಲ್ಲ.ಇವನನ್ನು ಹಿಡಿದಿದ್ದು ನೆಮ್ಮದಿ ತಂದಿದೆ ಅಂತಾರೆ.ನಂದಿತಾ ಬಡಾವಣೆ ನಿವಾಸಿ ಧರ್ಮದೇಟು ನೀಡಿದ ನಂತರ ವಿಷಯ ತಿಳಿದ ನಗರ ಪೋಲಿಸರು ಪ್ರವೀಣನನ್ನು ಭಂದನ ಮಾಡಿದ್ದಾರೆ.ಆದ್ರೆ ಕಳೆದ ಎರಡು ತಿಂಗಳಿಂದ ಪೋಲಿಸರಿಗೆ ವಿಷಯ ತಿಳಿಸಿದ್ರೂ ಪೋಲಿಸರ ಇತ್ತ ಕಡೆ ಗಮನಹಾಕಿಲ್ಲ ಅನ್ನೋದು ಸಾರ್ವಜನಿಕರ ವಾದ.ಇದೀಗ ಪೋಲಿಸರು ಪ್ರವೀಣನನ್ನು ಭಂದನ ಮಾಡಿದ್ದಾರೆ ನಿಜ,ಆದರೆ ವಾಮಾಚರದ ಹಿಂದೆ ಇದ್ದ ಪರಸಮ್ಮ ಯಾರು..?ಅವಳ ಎಲ್ಲಿಯವಳು ಅನ್ನೋದು ಗೊತ್ತಾಗಬೇಕಾದ್ರೆ ಪೋಲಿಸರು ಪರಸಮ್ಮನನ್ನು ಭಂದನ ಮಾಡಬೇಕಾಗಿದೆ —————————————————————-

Please follow and like us:
error