ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ – ಹಿರೇಗಡರ.

ಕೊಪ್ಪಳ- ಸರಕಾರಿ ಸೌಲಭ್ಯ ಸದೂಪಯೋಗ ಮಾಡಿಕೋಳ್ಳಬೇಕಾದರೆ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರ ಒಗ್ಗಟ್ಟಿನ ಭಲದಿಂದ ಸಾಧ್ಯ ಎಂದು ರಾಯಚೂರು ಬಳರಿ ಕೊಪ್ಪಳದ ಕೆ.ಎಮ್.ಎಫ್ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಹೇಳಿದರು. ಅವರು ಕೊಪ್ಪಳ  ತಾಲುಕಿ ಕಾತರಕಿ ಗುಡ್ಲಾನುರ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಗ್ರಾ. ಪಂ ಮಾಜಿ ಸದಸ್ಯರು ಬಿಳ್ಕೊಡುಗೆ ಸನ್ಮಾನ ಮತ್ತು ನೂತನವಾಗಿ ಆಯ್ಕೆಯಾದ ಸದಸ್ಯರುಗಳ ಸ್ವಾಗತ ಸಮಾರಂಭದಲ್ಲಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಗ್ರಾಮದ ಏಳಿಗೆಗಾಗಿ ದುಡಿದು ಅತ್ಯುತ್ತಮ ಗ್ರಾಮ ಪಂಚಾಯತಿ ಎಂದು ಕೀರ್ತಿಗೆ ಪಾತ್ರವಾದರೆ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷೆ ಮಲ್ಲಮ್ಮ ಗಂ ಮಲ್ಲಪ್ಪ ಮಾಂತಪ್ಪನವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಉಪಾಧ್ಯಕ್ಷ ಬಸವರಾಜ ಅಂಗಡಿ ಗ್ರಾ, ಪಂ ಮಾಜಿ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ ಸರಕಾರಿ ಪದವಿ ಪೂರ್ವ ಕಾಲೇಜಿನಪ್ರಾಚಾರ್ಯ ಎ.ವ್ಹಿ. ಉಪಾದ್ಯಾಯ ಪ್ರೌಢಶಾಲಾ ಮುಖ್ಯೋಪಾದ್ಯಾಯ ಹೆಚ್. ಹೆಚ್. ಜಂತ್ಲಿ, ಗ್ರಾ. ಪಂ ಸದಸ್ಯ ಮಲ್ಲಿಕಾರ್ಜುನ ವೈದ್ಯ ಕಾರ್ಯಕ್ರಮ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಕೆ.ಎಮ್.ಎಫ್ ಅಧ್ಯಕ್ಷ ವೆಂಕನಗೌಡ ಹಿರೇಗೌಡರಗೆ ಕಾತರಕಿ ಗುಡ್ಲಾನೂರ ಗ್ರಾಮ ಪಂಚಾಯತಿ ಸದಸ್ಯರಿಂದ ಸನ್ಮಾನಿಸಲಾಯಿತು. ನಂತರ ಗ್ರಾ. ಪಂ ಸಾಮಾನ್ಯ ಸಭೆ ನಡೆಸಲಾಯಿತು ಎಂದು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಪಾರ್ವತಿ ವ್ಹಿ. ತಿಳಿಸಿದ್

ದಾರೆ.

Leave a Reply