ಗವಿಶ್ರೀಗಳಿಂದ ವಾಲ್ಮೀಕಿ ಭಾವಚಿತ್ರ ಬಿಡುಗಡೆ

ಕೊಪ್ಪಳ, ಅ. ೨೨. ಕರ್ನಾಟಕ ವಾಲ್ಮೀಕಿ ಸೇನೆ ಕೊಪ್ಪಳ ಹಾಗೂ ವಿಶ್ವ ಆಫ್‌ಸೆಟ್ ಪ್ರಿಂಟರ್‍ಸ್ ಆಂಡ್ ಪೇಪರ್‍ಸ್ ವತಿಯಿಂದ ಹೊರತರಲಾದ ಮಹಾ ಋಷಿ ವಾಲ್ಮೀಕಿ ಭಾವಚಿತ್ರ ಹಾಗೂ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ವಾಲ್ಮೀಕಿ ಜಯಂತಿ ನಿಮಿತ್ಯ ಇಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮಹಾ ಋಷಿ ವಾಲ್ಮೀಕಿ ಭಾವಚಿತ್ರವನ್ನು ಹಾಗೂ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಭಾವಚಿತ್ರ ವನ್ನು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ಬಿಇಓ ಉಮೇಶ ಪೂಜಾರ, ಪ್ರಾಚಾರ್ಯ ಪರೀಕ್ಷೀತರಾಜ, ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕೋಟೇಶ ತಳವಾರ, ಹನುಮಂತಪ್ಪ ನಾಯಕ ಇತರರು ಇದ್ದರು.
Please follow and like us:
error