ಪರಿಶಿಷ್ಟ ಜಾತಿ, ಪಂಗಡದವರಿಗೆ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

koppal muncipalty
ಕೊಪ್ಪಳ : ಕೊಪ್ಪಳ ನಗರಸಭೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಕಳೆದ ೨೦೦೮-೦೯ ಹಾಗೂ ೨೦೦೯-೧೦ನೇ ಸಾಲಿನ ಬಾಕಿ ಉಳಿದಿರುವ ಅನುದಾನದಲ್ಲಿ ಶೇ. ೨೨. ೭೫ ರ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಯಕ್ತಿಕ ಗ್ಯಾಸ್ ಸಂಪರ್ಕ ಒದಗಿಸುವುದು, ವಯಕ್ತಿಕ ಶೌಚಾಲಯ ನಿರ್ಮಾಣ, ನೀರು ಸರಬರಾಜು ಮಾಡಲು ವಯಕ್ತಿಕ ನಳ ಸಂಪರ್ಕ ಒದಗಿಸುವುದು, ಸ್ವಯಂ ಉದ್ಯೋಗ ಮಾಡಲು ಸಹಾಯಧನ ಒದಗಿಸುವ ಯೋಜನೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಸಲು ಜಾತಿ, ಆದಾಯ ಪ್ರಮಾಣಪತ್ರ, ಕುಟುಂಬ ಪಡಿತರ ಚೀಟಿಯ ಸಂಪೂರ್ಣ ಜೆರಾಕ್ಸ್ ಪ್ರತಿ, ಇತ್ತೀಚಿನ ೩ ಭಾವಚಿತ್ರಗಳು, ಚಾಲ್ತಿ ಸಾಲಿನ ಆಸ್ತಿ ಕರ ಪಾವತಿ ಮಾಡಿದ ರಸೀದಿ ಹಾಗೂ ನಮೂನೆ-೩ ರ ಪ್ರತಿ, ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಪ್ರತಿ, ಸ್ವಯಂ ಉದ್ಯೋಗಕ್ಕೆ ಸಹಾಯಧನ ಪಡೆಯಲು ಸ್ವಯಂ ಉದ್ಯೋಗ ಮಾಡುತ್ತಿರುವ ಬಗ್ಗೆ ತರಬೇತಿ ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸಬೇಕು.  ಭರ್ತಿ ಮಾಡಿದ ಅರ್ಜಿಯನ್ನು ಪೌರಾಯುಕ್ತರು, ನಗರಸಭೆ, ಕೊಪ್ಪಳ ಇವರಿಗೆ ಡಿಸೆಂಬರ್ ೨೧ ರ ಒಳಗಾಗಿ ಸಲ್ಲಿಸುವಂತೆ  ತಿಳಿಸಿದೆ.
Please follow and like us:

Related posts

Leave a Comment