ಬೆಡೆನ್ ಪೊವೆಲ್ ಇಡೀ ವಿಶ್ವದ ವಿದ್ಯಾರ್ಥಿಗಳ ಪ್ರೇರಕ ಶಕ್ತಿ

ಕೊಪ್ಪಳ, ಫೆ. ೨೩. ವಿದ್ಯಾರ್ಥಿಗಳ ಮನೋವಿಕಾಸಕ್ಕೆ, ಆದರ್ಶ ಜೀವನಕ್ಕೆ ಹುಟ್ಟಿಕೊಂಡಿರುವ ಸ್ಕೌಟ್ಸ್ ಚಳುವಳಿ ಸ್ಥಾಪಕ ಬೆಡೆನ್ ಪೊವೆಲ್ ಇಡೀ ವಿಶ್ವದ ಪ್ರೇರಕ ಶಕ್ತಿ ಎಂದು ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಮಲಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಮತ್ತು ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆಡೆನ್ ಪೊವೆಲ್ ರವರ ೧೫೫ ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು, ಕೇವಲ ಬಟ್ಟೆಯಿಂದ ಬದಲಾವಣೆ ಆಗುವದಿಲ್ಲ ಅದೊಂದು ಸಂಕೇತವಾಗಿದೆ, ಆದರ್ಶಯುತವಾದ ಬದುಕನ್ನು ಸಾಗಿಸಬೇಕು, ಒಳ್ಳೆಯ ಕೆಲಸಗಳನ್ನು ಮಾಡಬೇಕು, ಜಿಲ್ಲೆಯಲ್ಲಿ ಇರುವ ಸರಕಾರೇತರ ಶಾಲೆಗಳು ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಗೆ ದೊಡ್ಡ ಕೊಡುಗೆ ನೀಡಿವೆ, ಬರುವ ದಿನಗಳಲ್ಲಿ ಖಡ್ಡಾಯವಾಗಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಸ್ಥಾಪಿಸಲು ಸರಕಾರ ಆದೇಶ ನೀಡಿದ್ದು, ಶಾಲೆಯ ಮುಖ್ಯಸ್ಥರು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.
.ಜಿಲ್ಲಾ ಕಾರ್ಯದರ್ಶಿ ಜಯರಾಜ ಬೂಸದ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಪುರಸ್ಕಾರ ಪಡೆಯಲು ಮಾಡಬೇಕಿರುವ ತರಬೇತಿ ಮತ್ತು ಲಾಗ್ ಬುಕ್ ಗಳನ್ನು ಕುರಿತು ವಿವರಿಸಿದರು, ಇದೇ ತಿಂಗಳು ಗಂಗಾವತಿ ತಾಲೂಕ ಮೈಲಾಪುರದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದ ಕುರಿತು ವಿವರ ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜನಕ ಬೆಡೆನ್ ಪೊವೆಲ್ ರವರ ಕಾಣಿಕೆ ಜಗತ್ತು ಸಂಭ್ರಮಿಸುವಂತಾದ್ದು. ವಿದ್ಯಾರ್ಥಿ ಜೀವನವನ್ನು ಆದರ್ಶಗೊಳಿಸುವಂತಾದ್ದು ಎಂದರು. ಆದರ್ಶ ವಿದ್ಯಾಲಯದ ಶಿಕ್ಷಕ ಮನೋಜಕುಮಾರ ವಸ್ತ್ರದ ಮತ್ತು ವಿದ್ಯಾರ್ಥಿನಿ ಸಂಗೀತಾ ಸುಮಧುರವಾಗಿ ಹಾಡಿದರು. ಶಿಕ್ಷಕಿ ಶಿವಲೀಲಾ, ಟ್ರಿನಿಟಿ ಶಾಲೆಯ ಶಿಕ್ಷಕರಾದ ನದಾಫ್ ಮತ್ತು ಪ್ರತಿಮಾ, ಆಕ್ಸಫರ್ಡ ಶಾಲೆಯ ಬಸವರಾಜ, ಶ್ರೀ ಗವಿಸಿದ್ಧೇಶ್ವರ ಶಾಲೆಯ ಗವಿಸ್ವಾಮಿ, ಸರಸ್ವತಿ ವಿದ್ಯಾಮಂದಿರದ ಮೆಹಬೂಬ ಇತರರು ಇದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಕಾರ್ಯದರ್ಶಿ ಎಂ. ಕೆ. ಹಿರೇಮಠ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಮಕ್ಕಳು ಸಾರ್ವಜನಿಕ ಮೈದಾನದಿಂದ ಶ್ರೀ ಗವಿಮಠದವರೆಗೆ ಜಾಥಾ ಮಾಡಿದರು.
Please follow and like us:
error