ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂಗಾರು ಹಂಗಾಮು ತರಬೇತಿ

  : ಮುಂಗಾರು ಹಂಗಾಮು ಪ್ರಾರಂಭವಾಗಲಿರುವ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ವದಗನಾಳ ಗ್ರಾಮದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
  ರಾಜ್ಯದೆಲ್ಲಡೆ ಮುಂಗಾರು ಪ್ರವೇಶಿಸುವ ಹಂತದಲ್ಲಿದ್ದು ರೈತರ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಹಲವಾರು ರೈತರು ನೀರಾವರಿ ವ್ಯೆವಸ್ಥೆಯಲ್ಲಿ ಬಿ.ಟಿ. ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಈಗಾಗಲೆ ಬಿತ್ತನೆ ಮಾಡಿದ್ದಾರೆ. ಆದರೆ, ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರದೇಶದ ಬೆಳೆಗಳಾದ ಸಜ್ಜೆ, ಹೆಸರು, ಉದ್ದು, ಸೂರ್ಯಕಾಂತಿ, ಗೋವಿನ ಜೋಳ, ಹುರಳಿ, ರಾಗಿ, ನವಣೆ, ಸೋಯಾ ಅವರೆ ಮುಂತಾದವುಗಳ ಬಿತ್ತನೆ ಇನ್ನು ಸಾಗಬೇಕಾಗಿದೆ.  ಮುಂಗಾರು ಹಂಗಾಮಿನ ಬೆಳೆಗಳ ಬಗ್ಗೆ ಸಮಗ್ರ ಬೇಸಾಯ ಮಾಹಿತಿ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ವದಗನಾಳ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬೇಸಾಯ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ತರಬೇತಿಯಲ್ಲಿ ವಿಜ್ಞಾನಿಗಳಾದ ಡಾ: ಮಲ್ಲಿಕಾರ್ಜುನ ಕೆಂಗನಾಳ ರೈತರಿಗೆ ಬೀಜಗಳ ಖರೀದಿ, ರಸಗೊಬ್ಬರಗಳ ಬಳಕೆ, ಸಾವಯವ ಪದಾರ್ಥಗಳ ಬಳಕೆ, ಬಿತ್ತನೇಯ ಸಮಯ, ಮಳೆ ಆಧರಿತ ಬೆಳೆಗಳ ಆಯ್ಕೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಿದರು. ವಿಸ್ತರಣಾ ಕೇಂದ್ರದ ಇತರ ವಿಜ್ಞಾನಿಗಳಾದ ಯುಸೂಫ ಅಲಿ ನಿಂಬರಗಿ ರೈತರಿಗೆ ಮಣ್ಣು ಪರೀಕ್ಷೆಯ ಲಘು ಪೋಶಕಾಂಶಗಳ ಬಳಕೆ ಮತ್ತು ಕಳೆ ನಾಶಕಗಳ ಬಳಕೆಯ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದರು. ಅಕ್ಕಮಹಾದೇವಿ ಅಗಸಿಮನಿ ಮಾತನಾಡಿ ತೋಟಗಾರಿಕೆ ಬೆಳೆಗಳಲ್ಲಿ ಸಸಿಗಳ ತಯಾರಿಕೆ, ಸಸಿ ಮಡಿ ಆರೈಕೆ ಮತ್ತು ಬೀಜಗಳಿಗೆ ಬೀಜೋಪಚಾರದ ಕುರಿತು ತಿಳಿಸಿದರು. ತರಬೇತಿಯಲ್ಲಿ ರೈತರು ಕೀಟ, ರೋಗ ಮತ್ತು ಇತರೆ ಪೀಡೆಗಳ ಹತೋಟಿಗೆ ಕೈಗೊಳ್ಳಬಹುದಾದ ಸಾಂಪ್ರದಾಯಿಕ ಮತ್ತು ಕಡಿಮೆ ಖರ್ಚಿನ ಪರ್ಯಾಯ ಕ್ರಮಗಳ ಬಗ್ಗೆ ತಿಳಿದುಕೊಂಡರು. ಬೇವಿನ ಬೀಜ ಮತ್ತು ಇತರ ಸಸ್ಯಜ್ಯ ಪದಾರ್ಥಗಳಿಂದ ಪೀಡೆಗಳ ನಿರ್ವಹಣೆಗೆ ಒತ್ತು ಕೊಟ್ಟು ಬೇಸಾಯದ ಖರ್ಚು ಕಡಿಮೆ ಮಾಡುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಯಿತು.
Please follow and like us:
error