ಉದ್ಯಮಿ ಶ್ರೀನಿವಾಸ ಗುಪ್ತಾರವರಿಗೆ ಕೇಂದ್ರದ `ನಿರ್ಯಾತ ಶ್ರೀ ಪ್ರಶಸ್ತಿ

ಕೊಪ್ಪಳ. ಅ. ೨೧: ತಾಲೂಕಿನ ಭಾಗ್ಯನಗರದ ಶ್ರೀನಿವಾಸ್ ಹೇರ್ ಇಂಡಸ್ಟ್ರೀಸ್‌ನ ಮಾಲೀಕ ಹಾಗೂ ಉದ್ಯಮಿ ಶ್ರೀನಿವಾಸ ಗುಪ್ತಾ ರವರಿಗೆ ಕೇಂದ್ರ ಸರಕಾರದ `ನಿರ್ಯಾತ ಶ್ರೀ ಪ್ರಶಸ್ತಿ ದೊರೆತಿದೆ.ತಿಷ್ಠಿತ ಪ್ರಶಸ್ತಿಯನ್ನು ಶ್ರೀನಿವಾಸ ಗುಪ್ತಾರವರು ಪಡೆದುಕೊಳ್ಳುತ್ತಿರುವುದು ಎರಡನೇ ಭಾರಿಯಾಗಿರುವುದು ವಿಶೇಷ.
ದೇಶದ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಕೊಡಲಾಗುವ ಈ ಪ್ರ
ತಮ್ಮ ಸರಕುಗಳನ್ನು ಎಲ್ಲರಿಗಿಂತ ಹೆಚ್ಚು ರಫ್ತು ಮಾಡುವುದು, ಉತ್ಪಾದನೆಗಳು ಉತ್ಕೃಷ್ಟ ಹಾಗೂ ಗುಣಮಟ್ಟದಿಂದ ಕೂಡಿರುವುದು, ಗ್ರಾಹಕರಿಂದ ಉತ್ಪನ್ನಗಳ ಮೇಲೆ ಯಾವುದೇ ರೀತಿಯ ಆಕ್ಷೇಪಣೆ ಹಾಗೂ ಪ್ರಕರಣಗಳಿರಬಾರದು ಎಂಬುದು ಸೇರಿದಂತೆ ಮತ್ತಿತರರ ಮಾನದಂಡಗಳ ಜೊತೆಗೆ ಇತರೆ ಸಹದ್ಯೋಗಿ ಉದ್ಯಮಿಗಳನ್ನೂ ಹಿಂದಿಕ್ಕಿ ಪ್ರಶಸ್ತಿ ಪಡೆಯುವುದು ಸಾಮಾನ್ಯ ವಿಷಯವಲ್ಲ. ಆದರೆ ಶ್ರೀನಿವಾಸ ಗುಪ್ತಾ ತಮ್ಮ ಗುಣಮಟ್ಟದ ಸರಕುಗಳನ್ನು ಅತಿ ಹೆಚ್ಚು ರಫ್ತು ಮಾಡಿ ದಾಖಲೆ ನಿರ್ಮಿಸಿರುವುದರಿಂದ ಪ್ರಶಸ್ತಿಗಳು ಇವರನ್ನೇ ಹಿಂಬಾಲಿಸಿ ಬರುತ್ತಿವೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೊಡಲಾಗುವ ಈ ಪ್ರಶಸ್ತಿಯನ್ನು ಶ್ರೀನಿವಾಸ ಹೇರ್ ಇಂಡಸ್ಟ್ರೀಸ್‌ನ ಶ್ರೀನಿವಾಸ ಗುಪ್ತಾ ರವರು ಈ ಹಿಂದೆ ೨೦೦೪-೦೫ರಲ್ಲಿ ಪಡೆದಿದ್ದರು. ಇದೀಗ ೨೦೦೯-೧೨ನೇ ಸಾಲಿನ ನಿರ್ಯಾತ ಶ್ರೀ ಪ್ರಶಸ್ತಿಯನ್ನು ಎರಡನೇ ಭಾರಿಗೆ ಪಡೆದುಕೊಂಡಿರುವುದು ಜಿಲ್ಲೆಗೆ ಹಿರಿಮೆ ಎನಿಸಿದೆ.
ದಾಖಲೆ: ಶ್ರೀನಿವಾಸ ಗುಪ್ತಾ ರವರು ಉದ್ಯಮ ರಂಗದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಇವರು ಕೇಂದ್ರ ಸರಕಾರದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಇದೇ ಮೊದಲಲ್ಲ, ಬಾಂಬೆ ಮೂಲದ ದಿ ಪ್ಲ್ಯಾಸ್ಟಿಕ್ ಎಕ್ಸಪೋರ್ಟ್ ಪ್ರಮೋಶನ್ ಕೌನ್ಸಿಲ್ ನೀಡುವ `ಟಾಪ್ ಎಕ್ಸಪೋರ್ಟ್ ಆವಾರ್ಡ ನ್ನು ಗುಪ್ತಾರವರು ಸತತವಾಗಿ ೧೧ ಭಾರಿ ಪಡೆದಿರುವುದು ಮತ್ತೊಂದು ವಿಶೇಷ.
ಶ್ರೀನಿವಾಸ ಹೇರ್ ಇಂಡಸ್ಟ್ರೀಸ್ ದೇಶದ ಕರ್ನಾಟಕದ ಕೊಪ್ಪಳ ಜಿಲ್ಲೆಯ ಭಾಗ್ಯನಗರ ಸೇರಿದಂತೆ ಆಂದ್ರಪ್ರದೇಶ. ಪಶ್ಚಿಮ ಬಂಗಾಳ, ಹರಿಯಾಣ, ರಾಜಸ್ಥಾನ, ದೆಹಲಿ ರಾಜ್ಯಗಳಲ್ಲೂ ತನ್ನ ಶಾಖೆಗಳನ್ನು ತೆರೆದು ಉದ್ಯಮದ ರಫ್ತು ರಂಗದಲ್ಲಿ ವಿಶೇಷ ಸಾಧನೆ ಮಾಡುತ್ತಿದೆ.
 ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ರವರು ಶ್ರೀನಿವಾಸ ಗುಪ್ತಾರವರಿಗೆ ೨೦೦೯-೧೨ನೇ ಸಾಲಿನ ನಿರ್ಯಾತ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕೇಂದ್ರ ಸಚಿವ ಆನಂದ ಶರ್ಮಾ, ಫೆಡರೇಷನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜ್ ಅಧ್ಯಕ್ಷ ಎಂ.ರಫೀಕ್ ಅಹ್ಮದ್, ಉಪಾಧ್ಯಕ್ಷ ಜೆಕೆ. ಜೈನ್ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error