You are here
Home > Koppal News > ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕೊಪ್ಪಳ: ನಗರದ ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಆಕಾಶ್ ಸವಡಿ ಮತ್ತು ಹರ್ಷ ನಾಲ್ವಡ್ ಇವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತಾಲೂಕಾ ಹಾಗೂ ಜಿಲ್ಲಾಮಟ್ಟದಲ್ಲಿ ಉತ್ತಮ ಪ್ರದರ್ಶನಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಇದಲ್ಲದೇ ಪೂರ್ವ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ  ಶಾಲೆಯ ವಿದ್ಯಾರ್ಥಿಗಳು  ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ೬೦೦ ಮೀಟರ್ ಓಟದಲ್ಲಿ  ಪ್ತಥಮ ಸ್ಥಾನವನ್ನು ಪ್ರೇಮಾ ಮೇಟಿ, ತೃತೀಯ ಸ್ಥಾನವನ್ನು ಪ್ರಮೋದ್ ದೊಡ್ಡಮನಿ, ೨೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು ರಮ್ಯಾ ಮಂಗಳಾಪುರ, ೧೦೦ ಮೀಟರ ಓಟದಲ್ಲಿ ಪ್ರಥಮ ಸ್ಥಾನವನ್ನು  ಸೌಂದರ್ಯ ಪಾದಮಕಟ್ಟಿ, ಗುಂಡು ಎಸೆತದಲ್ಲಿ  ಪ್ರಥಮ ಸ್ಥಾನವನ್ನು  ಸಕ್ಲೇನ್ ಹುನುಗುಂದ ಹಾಗೂ ಸುಮಯಾ ಖಾದ್ರಿ ,  ದ್ವಿತೀಯ ಸ್ಥಾನವನ್ನು ಶೀತಲ್‌ಶ್ರೀ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಗ್ರೀಷ್ಮಾ ಪಟ್ಟಣಶೆಟ್ಟಿ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಸಕ್ಲೇನ್ ಹುನುಗುಂದ,  ಚಕ್ರ ಎಸೆತದಲ್ಲಿ ತೃತೀಯ ಸ್ಥಾನವನ್ನು ಸುಮಯಾ ಖಾದ್ರಿ, ಕ್ರಮವಾಗಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ದೈಹಿಕ ಶಿಕ್ಷಕ  ಬಸಯ್ಯ ಹಿರೇಮಠ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗಾಗಿ ಸೋಲ್ ಟ್ರಸ್ಟಿಗಳು ಹಾಗೂ ಪೂಜ್ಯರು ಆದ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ. ಶಾಲೆಯ ಛೇರಮನ್‌ರಾದ ಶ್ರೀ ಎಸ್.ಆರ್.ನವಲಿಹಿರೇಮಠ, ಟ್ರಸ್ಟ್ ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ, ಸದಸ್ಯರಾದ ಸಂಜಯ ಕೊತಬಾಳ, ಶಾಲೆಯ ಮುಖ್ಯೋಪಾಧ್ಯಾಯಿನಿ ರೋಜ್ ಮೇರಿ ಹಾಗೂ ಸಹಶಿಕ್ಷಕಿ ವಿಜಯಾಹಿರೇಮಠ  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Top