ಕೃಷಿ ವಸ್ತು ಪ್ರದರ್ಶನ

ಕೊಪ್ಪಳ – ಕೊಪ್ಪಳದಲ್ಲಿ ಜರುಗುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಿಮಿತ್ಯ ಕೃಷಿ ಇಲಾಖೆಯು ಜ. ೦೭ ರಿಂದ ೦೯ ರವರೆಗೆ ಮೂರು ದಿನಗಳ ಕಾಲ ಕೃಷಿ ವಸ್ತು ಪ್ರದರ್ಶನವನ್ನು ಗವಿಮಠ ಜಾತ್ರೆ ಆವರಣದಲ್ಲಿ ಆಯೋಜಿಸಿದೆ.
  ಕೃಷಿ ವಸ್ತುಪ್ರದರ್ಶನದಲ್ಲಿ ಪ್ರಮುಖವಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ರೈತರಿಗೆ ನೆರವಾಗುವ ವಿಷಯಗಳ ಕುರಿತು ವಸ್ತುಪ್ರದರ್ಶನ ನಡೆಯಲಿದೆ.  ರೈತರು ಈ ಮೂರು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ, ಉತ್ತಮ ಮಾಹಿತಿ ಪಡೆಯಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply