ಸಮಾರೋಪ ಹಾಗೂ ಹಾಸ್ಯ ಕಾರ್ಯಕ್ರಮ

ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮೂರನೆಯ ದಿನದಂದು ಸಮಾರೋಪ ಸಮಾರಂಭ ಕಾರ್ಯಕ್ರಮವಿರುತ್ತದೆ. ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು,  ಶ್ರೀಮ.ನಿ.ಪ್ರ ಡಾ.ಚನ್ನಮಲ್ಲ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾರೋಪ ನುಡಿಯನ್ನು ಶ್ರೀ ಚಕ್ರವರ್ತಿ ಸೂಲಿಬೆಲೆ ನುಡಿಯಲಿದ್ದಾರೆ. ನಾಡಿನ ವಿವಿಧ ಹರಗುರುಚರ ಮೂರ್ತಿಗಳು ಭಾಗವಹಿಸಲಿದ್ದಾರೆ. ಮದ್ಯಾಹ್ನ ೩-೩೦ ಗಂಟೆಗೆ ವಿವಿಧ ಶಾಲಾಮಕ್ಕಳೀಂದ ಜಂಪ್-ರೂಪ್ ಕಾರ್ಯಕ್ರಮ ಹಾಗೂ ಸಾಯಂಕಾಲ ೬-೦೦ ಗಂಟೆಗೆ ಶ್ರೀಮತಿ ಪದ್ಮಾ ಶ್ರೀನಿವಾಸ ಸವಾಯಿ ಸೇಡಂ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಪಂ.ಶ್ರೀ.ವಿ.ಎಸ್.ಮಠ,ಶ್ರೀಮತಿ ಅಕ್ಕಮಹಾದೇವಿಮಠ, ಶ್ರೀರವಿಕಿರಣ ನಾಕೋಡ ಧಾರವಾಡ ಇವರಿಂದ ವಾದ್ಯ ಸಂವಾದ (ವಾಯಲಿನ್ ಜುಗಲ್ಬಂದಿ) ಕಾರ್ಯಕ್ರಮವು ಶ್ರಿಮಠದ ಕೈಲಾಸ ಮಂಟಪದಲ್ಲಿ ನಡೆಯಲಿದೆ. ಇದಾದನಂತರ  ಬಿ.ಪ್ರಾಣೇಶ,ಗಂಗಾವತಿ   ರಿಚರ್ಡ ಲೂಯಿಸ್ ಇವರಿಂದ ನಕ್ಕರೆ ಸ್ವರ್ಗ ಹಾಸ್ಯ ಕಾರ್ಯಕ್ರಮಗಳು ಜರುಗುತ್ತವೆ.
Please follow and like us:
error