ಇಟಗಿ ಗೆಲವು ಖಚಿತ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ,೧೯,  ಕ್ಷೇತ್ರದ ಬಂಡಿಹರ್ಲಾಪುರ, ಹಿಟ್ನಾಳ, ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಶಿವಪೂರ, ಅಗಳಕೇರಾ, ಹಿಟ್ನಾಳ, ಹೊಸಳ್ಳಿ, ಮುನಿರಾಬಾದ್, ಗುಡದಳ್ಳಿ, ಬೇವಿನಹಳ್ಳಿ, ಹಾಗೂ ಗಿಣಿಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾಯಚೂರು-ಕೊಪ್ಪಳ ವಿದಾನಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ತತ್ವಸಿದ್ದಾಂತದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಚುನಾವಣೆಯ ಬಿ-ಫಾರ್ಮನನ್ನು ರಾಜಕೀಯ ಗಂಧ-ಗಾಳಿ ಗೊತ್ತಿಲ್ಲದ ನಿರ್ಮೀತಿ ಅಧಿಕಾರಿಗೆ ನೀಡಿ ಈಗಾಗಲೇ ನೈತಿಕವಾಗಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಈ ೬೭ ವರ್ಷದಲ್ಲಿ ಪಂಚಾಯತ
ರಾಜ್ಯ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿ ಅಧಿಕಾರ
ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು
ಅನೇಕ ಜನಪರ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದ್ದು, ವಿದಾನ ಪರಿಷತ್ ಚುನಾವಣೆಯಲ್ಲಿ
೨೦ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಬೇರಿ ಬಾರಿಸಲಿದ್ದಾರೆ. ಕೇವಲ
ಆಸೆ-ಆಮಿಷ ತೊರಿಸುತ್ತಿರುವ ಬಿಜೆಪಿ ನಾಯಕರ ಹಗಲು ಕನಸನ್ನು ಸ್ಥಳೀಯ ಸಂಸ್ಥೆಯ ಚುನಾಯಿತ
ಪ್ರತಿನಿಧಿಗಳು ಇವರನ್ನು ದೂಳಿಪಟ ಮಾಡಲಿದ್ದಾರೆ. ೧೦೦೦ ಸಾವಿರ ಮತಗಳ ಅಂತರದಿಂದ ಬಸವರಾಜ
ಪಾಟೀಲ ಇಟಗಿ ಜಯಬೇರಿ ಬಾರಿಸಲಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ
ತೊರೆದು ಶಿವಪೂರ ಪಂಚಾಯತಿಯ ೪ ಜನ ಸದಸ್ಯರು ವಿಜಯಲಕ್ಷ್ಮಿ, ಲಕ್ಷ್ಮಣ ನಾಯಕ್, ಪಾತೀಮಾ
ಬೇಗಂ, ಮಾರುತಿ ಸಿ, ವೆಂಕಟೇಶ ಚನ್ನದಾಸರವರು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್
ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾಜಿ.ಜಿ.ಪಂ, ಅಧ್ಯಕ್ಷರಾದ ಟಿ.ಜನಾರ್ದನ
ಹುಲಗಿ, ಕೆ.ರಮೇಶ ಹಿಟ್ನಾಳ, ಬಾನು ಬೇಗಂ, ಮರ್ದಾನಪ್ಪ ಬಿಸರಳ್ಳಿ, ವಿಶ್ವನಾಥ ರಾಜೂರು,
ದೇವಣ್ಣ ಮೇಕಾಳಿ, ಗ್ರಾ.ಪಂ. ಅಧ್ಯಕ್ಷ ಆರ್.ಡಿ.ಮುಲ್ಲಾ, ರುಪ್ಲಾ ನಾಯಕ್,
ಮಲ್ಲಿಕಾರ್ಜುನ ಅಗಳಕೇರಾ, ವೆಂಕಣ್ಣ ಹೊಸಳ್ಳಿ, ಮಂಜುನಾಥ ಕಲಾಲ್, ಬಾಲಚಂದ್ರ, ಭರಮಪ್ಪ
ಬೇಲ್ಲದ್, ಗೌಸ್ ಮುನಿರಾಬಾದ್, ಚಾಂದಸಾಬ್, ಅಚ್ಚಣ್ಣ, ಜಿಯಾ ಖಾನ್, ಅಮೀರ ಖಾನ್ ಹುಲಗಿ,
ವೀರಭದ್ರಯ್ಯ ಸ್ವಾಮಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error