ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

ಗಂಗಾವತಿ :  ಕಾಲೇಜಿನ ಅವ್ಯವಸ್ಥೆಯನ್ನು ಖಂಡಿಸಿ ಸ್ನಾತಕೊತ್ತರ ಪದವಿ ಮತ್ತು ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರು.ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜಿನಲ್ಲಿ ಆಂತರಿಕ ಪರೀಕ್ಷೆಗಳು ನಡೆಯುತ್ತಿದ್ದು  ಆಸನಗಳ ಕೊರತೆಯಿಂದ ಒದ್ದಾಡಿದ ವಿದ್ಯಾರ್ಥಿಗಳು ಆಸನದ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ.ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ  ಒತ್ತಾಯಿಸಿದರೂ ಸರಿಮಾಡದಿದ್ದಾಗ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಮತ್ತು ವಿವಿ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದರು.

Leave a Reply