೨೦ ವರ್ಷಗಳ ನಂತರ ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕ್.

ಕೊಪ್ಪಳ,ಫೆ:೨೮ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಿವಣ್ಣ ಹಂದ್ರಾಳ ಹಾಗೂ ಶ್ರೀಮತಿ ಶಕುಂತಲಾ ಹುಡೇಜಾಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆದ್ಯಕ್ಷ ಸ್ಥಾನಕ್ಕೆ ಪೈಪೂಟಿ ನಡೆಸಿದ ಬಿ.ಜೆ.ಪಿ. ಅಭ್ಯರ್ಥಿ ಕರಿಯಪ್ಪ ಮೇಟಿಗೆ ೦೫ ಮತ ಹಾಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶಿವಣ್ಣ ಹಂದ್ರಾಳರಿಗೆ ೦೭ ಮತಗಳಿಂದ ಜಯಬೇರಿ ಬಾರಿಸಿದರು. ಉಪಾಧ್ಯಕ್ಷರ ಸ್ಥಾನಕ್ಕೆ ಅಡ್ಡಮತದಾನವಾದ್ದರಿಂದ ಇಬ್ಬರು ಅಭ್ಯರ್ಥಿಗಳಿಗೆ ೦೬ ಮತಗಳು ಚಲಾವಣೆಗೊಂಡಿದ್ದವು. ಚೀಟಿ ಎತ್ತುವದರ ಮೂಲಕ ಕಾಂಗ್ರೇಸ್ ಅಭ್ಯಥಿಯಾದ ಶಕುಂತಲಾ ಹುಡೇಜಾಲಿಯವರಿಗೆ ಅದೃಷ್ಟಲಕ್ಷ್ಮಿ ಒಲಿದಳು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಬಸವರಾಜ ಹಿಟ್ನಾಳ, ಪಕ್ಷದ ಮುಖಂಡರಾದ ಎಸ್.ಬಿ ನಾಗರಳ್ಳಿ,  ಅಂದಣ್ಣ ಅಗಡಿ. ಶಾಂತಣ್ಣ ಮುದುಗಲ್, ಹೆಚ್.ಎಲ್.ಹಿರೇಗೌಡ್ರು, ಜುಲ್ಲು ಖಾದರಿ, ಕೆ.ಎಮ್.ಸಯ್ಯದ್, ಗವಿಸಿದ್ದಪ್ಪ ಮುದುಗಲ್, ಈಶಪ್ಪ ಮಾದಿನೂರು, ಹನುಮರೆಡ್ಡಿ ಹಂಗನಕಟ್ಟಿ, ಪ್ರಸನ್ನ ಗಡಾದ, ವೆಂಕನಗೌಡ್ರು ಹಿರೇಗೌಡ್ರು, ಕೇಶವರೆಡ್ಡಿ, ಗುಳಪ್ಪ ಹಲಗೇರಿ, ಬಾಳಪ್ಪ ಬಾರಕೇರ, ಮುತ್ತುರಾಜು ಕುಷ್ಟಗಿ, ಮೇಹಬುಬ್ ಮಚ್ಚಿ, ಕಾಟನ್ ಪಾಷಾ, ಮಾನ್ವಿ ಪಾಷಾ, ಧಾರವಾಡ ರಫಿ, ರಾಮಣ್ಣ ಕಲ್ಲಣ್ಣವರು, ಯಮನೂರಪ್ಪ ನಾಯಕ್, ಮುನೀರ ಸಿದ್ದಕಿ, ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.
    
Please follow and like us:
error