fbpx

ಕಣ್ವಮಠೀಯದಿಂದ ಧರ್ಮ ಪ್ರತಿಜ್ಞಾ ಸ್ವೀಕಾರ

 ಕೊಪ್ಪಳ, ೧೮- ಕಣ್ವಮಠದ ಧರ್ಮ ಸಂರಕ್ಷಣೆಗೆಗಾಗಿ ಸಮಾಜದ ಪ್ರಮುಖರು ಧರ್ಮ ಪ್ರತಿಜ್ಞಾ ಸ್ವೀಕರಿಸಿ ಮಠದ ಸಂರಕ್ಷಣೆಗೆ ಕಟ್ಟಬದ್ಧರಿರುವುದಾಗಿ ನಿರ್ಣಯಿಸಿದರು.

ಸೋಮವಾರದಂದು ನಗರದ ವೇ.ಮೂ. ಕೊಟ್ರೇಶಾಚಾರ್ಯ ನೇತೃತ್ವದಲ್ಲಿ ಜರುಗಿದ ಕಣ್ಣಮಠದಿಂದ ಸಭೆಯಲ್ಲಿ ನೆರೆದಿದ್ದ ನೂರಾರು ಜನರು ಪ್ರತಿಜ್ಞ ನಡೆಯಿತು.
ಕಣ್ವಮಠೀಯವರಾದ ನಮಗೆ ಶ್ರೀ ಯಾಜ್ಞವಲ್ಕ್ಯರೇ ಅತ್ಯಂತ ಅಗ್ರಾಮನ್ಯ ಪರಮಗುರುಗಳು. ಶ್ರೀ ಕಣ್ವಮಠವು ಸಮಸ್ತ ಕಣ್ವಶಾಖೀಯರ ಅಂದರೆ ವೈಷ್ಣವ ಹಾಗೂ ಶೈವ ಸಂಪ್ರದಾಯದವರಮಠವು. ಕಣ್ವಾಶಾಖೀಯ ಧಾರ್ಮಿಕ ಕೇಂದ್ರಗಳಲ್ಲಿ ಅನೇಕ ವರ್ಷಗಳಿಂದ ಇಂದಿನವರೆಗೆ ಬಂದಿರುವ ಸಂಪ್ರದಾಯ ಆಚರಣೆಗೆ ಆದ್ಯತೆ ಕೊಡುವುದು. ಕಣ್ವಶಾಖೀಯ ಮೂಲಧರ್ಮಗ್ರಂಥ ಹಾಗೂ ವಿದಿ-ವಿಧಾನಗಳನ್ನೊಳಗೊಂಡ ಕಣ್ವಮಠೀಯ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿರುವುದು. ಶ್ರೀ ಮಠವು ಕೇವಲ ಕಣ್ವಶಾಖೀಯ ಮಧ್ವಮಠ ಎಂದು ವಾದಿಸುವವರನ್ನು ಖಂಡಿಸುವದು ಹಾಗೂ ಧಿಕ್ಕರಿಸುವುದು. ನಮ್ಮ ಮಠದ ಯತಿಧೀಕ್ಷಾಪಾರಂಪರಿಕವಾಗಿ ಮಧ್ವಾಚಾರ್ಯರು ಗುರುಗಳಾದರೂ ನಮಗೆ ವೇದ ಶಾಖಾ ಉಪನಿಷತ್ ಧರ್ಮಗ್ರಂಥ ಮುಂತಾದವುಗಳನ್ನು ಶ್ರೀಯಾಜ್ಞವಲ್ಕ್ಯರೇ ಅನುಗ್ರಹಿಸಿದ್ದರಿಂದ ನಮಗೆ ಯಾಜ್ಞವಲ್ಕ್ಯರಿಗಿಂತ ಮಧ್ವಾಚಾರ್ಯರೇ ಮುಖ್ಯ ಹಾಗೂ ದೊಡ್ಡಗುರುಗಳೆಂದು ವಾದಿಸುವವರನ್ನು ಖಂಡಿಸುವುದು ಹಾಗೂ ಧಿಕ್ಕರಿಸುವುದು.
ಕಣ್ವಶಾಖೀಯ ವೇದ ಅಥವಾ ಕಣ್ವಶಾಖೀಯ ಅನುಯಾಯಿಗಳನ್ನು ಅವಮಾನಿಸುವ ಯಾವುದೇ ವ್ಯಕ್ತಿಯಾಗಲಿ ಅಂಥವರನ್ನು ಧಿಕ್ಕರಿಸಲೇಬೇಕು. ಸ್ವಮಠಿಯ ಹಾಗೂ ಸ್ವಶಾಖೀಯ ಗ್ರಂಥಾಧಾರ ವ್ಯಾಪ್ತಿಯಲ್ಲಿ ಮಾತ್ರ ಸ್ವಧರ್ಮದ ಬಗ್ಗೆ ಚರ್ಚಿಸಬಹುದು ಇನ್ನೂಳಿದ ಗ್ರಂಥಾಂಥರ್ಗಾತ ವಿಷಯ ಚರ್ಚೆಗೆ ಪ್ರಾಮುಖ್ಯತೆ ಕೊಡಬಾರದು. ಸ್ವಶಾಖೀಯ ಸ್ವಧರ್ಮೀಯ ಗ್ರಂಥಗಳ ಅಧ್ಯಯನ ಹಾಗೂ ಸ್ವಧರ್ಮಾಚರಣೆಯಿಂದ ವಂಚಿತರಾಗಿ ಪರಮಠಿಯರಲ್ಲಿ ಅನ್ಯಶಾಖೀಯ ಅಧ್ಯಯನ ಮಾಡುತ್ತಿರುವ ಅಂದಾಜು ೪೦ ನಮ್ಮ ಶಾಖೀಯ ವಿದ್ಯಾರ್ಥಿಗಳನ್ನು ಸ್ವಧರ್ಮಕ್ಕೆ ಕರೆತಂದು ಸ್ವಧರ್ಮಿಯ ವಿದ್ಯೆಯನ್ನು ಕಲಿಸುವ ಮುಖಾಂತರ ಸ್ವಧರ್ಮ ರಕ್ಷಣೆ ನಮ್ಮ ಮುಖ್ಯಧ್ಯೆಯವಾಗಿರುಬೇಕು. ಈ ಮಹತ್ವಪೂರ್ಣ ಕಾರ್ಯಕ್ಕೆ ಕಣ್ವಶಾಖೀಯ ಸಂಸ್ಥೆಗಳು ಹಾಗೂ ಶ್ರೀ ಯಾಜ್ಞವಲ್ಕ್ಯ ಗುರುಕುಲ ಕೊಪ್ಪಳ ಇವರು ಸಂಪೂಣಂ ಕಟಿಬದ್ಧರಾಗಿದ್ದಾರೆ.
ಕಾರ್ಯಕ್ರಮದ ವೇದಿಕೆ ಮೇಲೆ ಅಧ್ಯಕ್ಷತೆಯನ್ನು ವೇ.ಮೂ. ಕೊಟ್ರೇಶಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ರಮೇಶ ಹುನಗುಂದ, ರಾಮಾಚಾರ ಹೊಸಪೇಟೆ ಉಪಸ್ಥಿತರಿದ್ದರು. ಸಭೆಯಲ್ಲಿ ರಾಜ್ಯದ ೧೦ ಜಿಲ್ಲೆಯ ಪ್ರತಿನಿಧಿಗಳ ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!