ಶೋಭಾಯಾತ್ರೆ ಮೆರವಣಿಗೆ

ಕೊಪ್ಪಳ : ಬದುಕಿನಿಂದ ವೈರಾಗ್ಯಪಡೆದು ಸನ್ಯಾಸ ದೀಕ್ಷೆ ಪಡೆಯುತ್ತಿರುವ ಮೂರು ಜನ ಬ್ರಹ್ಮಚಾರಿಣಿಯರನ್ನು ಇಂದು ಶೋಭಾಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಯಿತು. ಅಶೋಕ ಸರ್ಕಲ್ ನಿಂದ ಗೋಶಾಲೆಯವರೆಗೆ ಈ ಮೆರವಣಿಗೆ ನಡೆಯಿತು. ನಂತರ ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಗವಿಮಠದ ಶ್ರೀಗಳು ಮಾತನಾಡಿದರು. ದೀಕ್ಷೆ ಪಡೆಯುವುದು ಸುಲಭದ ಮಾತಲ್ಲ ಇದಕ್ಕಾಗಿ ಅವರ ತಂದೆ ತಾಯಂದಿರು ಮಾಡಿರುವ ತ್ಯಾಗ ದೊಡ್ಡದು, ಕೊಪ್ಪಳ ಯಾವತ್ತೂ ಜೈನಕಾಶಿಯೆಂದೇ ಖ್ಯಾತವಾಗಿದೆ. ಇಲ್ಲಿಯ ಯುವತಿ ದೀಕ್ಷೆ ಪಡೆಯುತ್ತಿರುವುದು ನಿಜಕ್ಕೂ ಎಲ್ಲರೂ ಹೆಮ್ಮೆ ಪಡುವ ವಿಷಯ ಎಂದರು. ದೀಕ್ಷೆ ಪಡೆಯುತ್ತಿರುವ ಶಿವಮೊಗ್ಗದ ಶಿಲ್ಪಾ ಜೈನ್, ಬ್ರಹ್ಮಚಾರಿಣಿ ದೀಕ್ಷೆ ಪಡೆಯುತ್ತಿರುವ ಕೊಪ್ಪಳದ ಶಿಲ್ಪಾ ಬಾಗ್ರೇಚ್, ಹುಬ್ಬಳ್ಳಿಯ ಕೀರ್ತಿ ಕಾನುಂಗ ಮಾತನಾಡಿದರು. ಬೆಂಗಳೂರಿನಲ್ಲಿ 15ರಂದು ನಡೆಯವ ಕಾರ್ಯಕ್ರಮದಲ್ಲಿ ಮೂವರು ದೀಕ್ಷೆ ಪಡೆಯಲಿದ್ದಾರೆ .

Leave a Reply