ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಗೆ ಹಲವಾರು ಯುವಕರು ವೇದಿಕೆಗೆ ಸೇರ್ಪಡೆ

 ಗದಗ :  ರಂದು ವೇದಿಕೆಯ ರಾಜ್ಯ ಕಛೇರಿಯಲ್ಲಿ . ಹುಲಕೋಟಿ.ಕೂರ್ತಕೋಟಿ, ಹರ್ತಿ ಗ್ರಾಮದ ಯುವಕರು ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯ ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ ಕೊಪ್ಪಳ ಅವರ ನೆತೃತ್ವದಲ್ಲಿ ಸೇರ್ಪಡೆಯಾದರು, ಈ ಸಂದರ್ಭದಲ್ಲಿ ಮಾತನಾಡಿದ ಸಯ್ಯದ್ ಖಾಲಿದ್ ಕೊಪ್ಪಳ ಅವರು ವೇದಿಕೆಯಲ್ಲಿ ನಿಷ್ಠಾವಂತ ಜನ ಪರ ಹೋರಾಟ ಮಾಡುತ್ತಿದ್ದು ಹಲವಾರು ಯುವಕರ ದಂಡು ವೇದಿಕೆಯ ಜನ ಪರ ಸೇವೆಯನ್ನು ಮೇಚ್ಚಿ  ಬರುತ್ತಿದ್ದಾರೆ. 
           

ಈ ವೇಳೆಗೆ ರವಿ ಕವಡಕಿ ಅವರನ್ನು ಗದಗ ತಾಲೂಕ ಅಧ್ಯಕ್ಷರಾಗಿ ನೇಮಕ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರವಿ ಕವಡಕಿ ಅವರು ವೇದಿಕೆಯ ಪರವಾಗಿ ಸದಾ ಶ್ರಮೀಸುವೆನೆಂದು ಹೇಳಿದರು .ಈ ಸಂದರ್ಭದಲ್ಲಿ ದಾನಪ್ಪ ಜುಮ್ಮಣ್ಣವರ, ರಾಘವೇಂದ್ರ, ಮಂಜುನಾಥ ಹುಬ್ಬಳ್ಳಿ, ಉಮೇಶ ಗುಲಗಂಜಿ, ವಿ,ವಿ, ಪಾಟೀಲ, ಎಸ್,ಆರ್, ಗೌಡರ , ಆನಂದ ದಿಡ್ಡಿ, ಹನುಮಂತ ದಿಡ್ಡಿ, ಮುತ್ತು ಆಯ್. ಜಡಿ. ಸೇರ್ಪಡೆಯಾದರು. ಹಾಗೂ   ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀಪ್ರಸಾದ ಸತ್ಯಣ್ಣವರ, ಸಾಹಿಲ್ ನವಲಗುಂದ, ಸೋಮನಾಥ ನವಲೆಕರ್, ನಸರತ್ ಮುಲ್ಲಾನವರ,ಉಪಸ್ಥಿತರಿದ್ದರು.  

Please follow and like us:
error