ಆದರ್ಶಗಳ ಜೊತೆ ವಾಸ್ತವದ ಅರಿವಿರಬೇಕು- ಕೊತಬಾಳ

ಕೊಪ್ಪಳ : ವಾಸ್ತವದ ಅರಿವಿಲ್ಲದ ಹಿಂದಿನ ಹೋರಾಟಗಳಿಂದ ಮುಂದೆ ಪಶ್ಚಾತ್ತಾಪಡುವಂತಾಗದೆ.  ಅದರ್ಶಗಳ ಜೊತೆ ವಾಸ್ತವ ಅರಿವಿನೊಂದಿಗೆ ಹೋರಾಟಗಳಲ್ಲಿ ಧುಮಕಬೇಕು. ಬರೆಯಬೇಕು. ನಮ್ಮ ಸಾಹಿತ್ಯ ಮನಸ್ಸಿಗೆ ನೇರವಾಗಿ ಮುಟ್ಟುವಂತಿರಬೇಕು. ನಾವು ಬರೆದಂತೆ ಬದುಕಲು ಪ್ರಯತ್ನಿಸಬೇಕು. ಗವಿಸಿದ್ದ್ ಎನ್.ಬಳ್ಳಾರಿಯವರ ದ್ವಂದ್ವಗಳನ್ನು ಒಂದು ಕಾಲಕ್ಕೆ ಟೀಕಿಸುತ್ತಿದ್ದ ನಾವೆಲ್ಲಾ ಮುಂದೊಂದು ದಿನ ಅವರ ಹೋರಾಟದ ಬದುಕನ್ನು ಕಂಡು ತಳಮಳಗೊಂಡಿದ್ದೇವೆ. ಕೊಪ್ಪಳದ ಎಲ್ಲ ಹೋರಾಟಗಳ ಭಾಗವಾಗಿದ್ದ ಗವಿಸಿದ್ದ ಎನ್.ಬಳ್ಳಾರಿ ನಮ್ಮ ಭಾಗದ ಅತ್ಯುತ್ತಮ ಕವಿ, ಶಬ್ದ ಗಾರುಡಿಗ ಎಂದು ಹೋರಾಟಗಾರ, ಸಾಹಿತಿ ಮಹಾಂತೇಶ ಕೊತಬಾಳ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿಮಂದಿರದಲ್ಲಿ  ಹಮ್ಮಿಕೊಂಡಿದ್ದ ೮೨ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಗವಿಸಿದ್ದ ಎನ್.ಬಳ್ಳಾರಿಯವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು. 
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ  ಮಹೇಶ ಬಳ್ಳಾರಿ -ಗಡಾಫಿ, ಡಾ.ಬಸು ದೋಟಿಹಾಳ(ಕುಂಪಾ) ಪೇಟೆಯಲ್ಲಿ ಒಂದು ದಿನ, ಮಹಾಂತೇಶ ಕೊತಬಾಳ- ಹೀಗೆ ನಿಮ್ಮಲ್ಲೊಬ್ಬ, ನಾನು ಶರೀಪನಾಗಬೇಕೆಂದಿದ್ದೆ, ಡಾ.ಮಹಾಂತೇಶ ಮಲ್ಲನಗೌಡರ- ನೀನು, ಡಾ.ರೇಣುಕಾ ಕರಿಗಾರ- ನೀ ಇದ್ದಿದ್ದರೆ, ಶಿವಪ್ರಸಾದ ಹಾದಿಮನಿ-ಕಾಪಾಡುವ ಶಿವ, ಕುರುವತ್ತಿಗೌಡ ಗೊಂಡಬಾಳ- ಹಸಿವು, ಪ್ರಕಾಶ ಗೊಂಡಬಾಳ- ಹೆಣ್ಣು, ಬಸವರಾಜ್ ಚೌಡಕಿ- ತುಂಟ ಸೃಷ್ಟಿ, ಗುರುರಾಜ ಅಂಗಡಿ- ಸಾವಿತ್ರಿ, ಅರ್ಥ, ಬಸವರಾಜ್ ಸಂಕನಗೌಡರ- ಮದುವೆ, ಹನುಮಂತಪ್ಪ ಅಂಡಗಿ- ವಿಷ್ಣುವರ್ಧನ್, ವಿಜಯಲಕ್ಷ್ಮೀ ಮಠದ- ಜೀವಕಳೆ, ವಿಮಲಾ ಇನಾಂದಾರ್- ಹೂ ದುಂಬಿ, ಎನ್.ಜಡೆಯಪ್ಪ- ಧೂಳು,  ಕವನಗಳನ್ನು ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ಬಸವರಾಜ್ ಶೀಲವಂತರ, ಶಿವಾನಂದ ಹೊದ್ಲೂರ್, ಶಾಂತು ಬಡಿಗೇರ್, ಕೆ.ಎಫ.ಸಂಗಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅನಸೂಯಾ ಜಾಗೀರದಾ ಭಾವಗೀತೆ ಹಾಡಿದರು.ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು  ಬಸವರಾಜ್ ಸಂಕನಗೌಡರ ಮಾಡಿದರೆ. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು. 

Leave a Reply