ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ, ಮಾ.೨೪  : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ರಾಂಪೂರ ಗ್ರಾಮದ ಮಹೇಶ ಕುಮಾರ್(೧೬) ಎಂಬ ಬಾಲಕನು ೨೦೧೫ ರ ಜ.೦೭ ರಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಕಾಣೆಯಾಗಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೋಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
  ಕಾಣೆಯಾದ ಬಾಲಕನ ವಿವರ ಇಂತಿದೆ ಹೆಸರು : ಮಹೇಶ ಕುಮಾರ್ ಗೋರೆಬಾಳ, ವಯಸ್ಸು : ೧೬ ವರ್ಷ, ತಾಯಿ ಹೆಸರು ನೀಲಮ್ಮ ಗೋರೆಬಾಳ ಅವರ ಮಗನಾದ ಜಾತಿ : ಲಿಂಗಾಯತ ಲಿಂಗ : ಪುರುಷ, ಎತ್ತರ : ೧೩೫.೦೦ ಸೆಂ, ಮೀ, ಕಪ್ಪು ಗುಂಗುರು ಕೂದಲು, ಬೆಳ್ಳನೇ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕಾಲೇಜಿಗೆ ಹೋಗುವಾಘ ಒಂದು ನೀಲಿ ಬಣ್ಣದ ಟೀ ಶರ್ಟು ಮತ್ತು ಒಂದು ನೀಲಿ ಬಣ್ಣದ ಪ್ಯಾಂಟು ಧರಿಸಿದ್ದ, ಪ್ರಥಮ ಪಿ.ಯು.ಸಿ ಓದುತ್ತಿರುವ ಈತ, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈ  ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ದೊರಕಿದಲ್ಲಿ ತಾವರಗೇರಾ ಪೋಲೀಸ್ ಠಾಣೆಯ ದೂರವಾಣಿ ಸಂಖ್ಯೆ : ೦೮೫೩೬-೨೭೫೩೨೨ ಅಥವಾ ಕುಷ್ಟಗಿ ಪೋಲೀಸ್ ಠಾಣೆಯ ೦೮೫೩೬ ೨೬೭೦೩೩ ಈ ದೂರವಾಣಿಗಳಿಗೆ ಸಂಪರ್ಕಿಸಬಹುದಾಗಿದೆ .
Please follow and like us:
error

Related posts

Leave a Comment