ಬಕ್ರೀದ್ ಶಾಂತಿ ಸಹಬಾಳ್ವೆ ಸಂಕೇತ-ಕೆ ಬಸವರಾಜ ಹಿಟ್ನಾಳ.

ಕೊಪ್ಪಳ-೨೫, ನಗರದ ಹುಲಿಕೇರಿ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ೦೯-೦೦ ಗಂಟೆಗೆ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ಅವರು ಬಕ್ರೀದ್ ಹಬ್ಬವು ಸುನ್ನತೆ ಇಬ್ರಾಹಿಂ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಪ್ರತಿಯೊಬ್ಬ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರ್ಬಾನಿ ಕೊಡುವುದು ಸಂಪ್ರದಾಯವಾಗಿದೆ. ಸತ್ಯ, ನಿಷ್ಠೆ, ತಾಳ್ಮೆ, ತ್ಯಾಗ ಬಲಿದಾನದ ಬಕ್ರೀದ್ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ತರಲೆಂದು ಹೇಳಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಲ್ಗೊಂಡ ಮುಸಲ್ಮಾನ ಭಾಂದವರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.   
    ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮುಫ್ತಿ ನಜೀರ ಅಹೆಮಾದ, ಎಸ್.ಬಿ ನಾಗರಳ್ಳಿ, ಮುಸ್ಲಿಂ ಸಮಾಜದ ಮುಖಂಡರುಗಳಾದ ಬಾಷುಸಾಬ ಖತೀಬ, ಅಜಗರಲಿ ನವಾಬ, ಜಾಕೀರ್ ಹುಸೇನ ಕಿಲ್ಲೇದಾರ, ಮಕ್ಬುಲ್ ಮನಿಯಾರ, ಇಬ್ರಾಹಿಂ ಅಡ್ಡೇವಾಲೆ, ಮೆಹೆಬೂಬ ಮಚ್ಚಿ, ಅಕ್ಬರ್ ಪಾಷಾ ಪಲ್ಟನ್, ಅಬ್ದುಲ್ ಅಜೀಜ ಮಾನ್ವಿ, ಧಾರವಾಡ ರಫೀ, ಮೆಹೆಬೂಬ ಅರಗಂಜಿ, ಇನ್ನೂ ಅನೇಕ ಮುಸಲ್ಮಾನ ಬಾಂಧವರು ಈ ಸಂಭ್ರಾಮಾಚರಣೆಯಲ್ಲಿ ಪಲ್ಗೊಂಡಿದ್ದರು. 

Leave a Reply