You are here
Home > Koppal News > ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು-ಬಸವರಾಜ್ ಭೋವಿ.

ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು-ಬಸವರಾಜ್ ಭೋವಿ.

ಕೊಪ್ಪಳ-27-  ಪ್ರಪಂಚಕ್ಕೆ ರಾಮಾಯಾಣ ನೀಡಿದ  ಮಹರ್ಷಿ ವಾಲ್ಮೀಕಿಯವರ ಆದರ್ಶ-ತತ್ವಗಳನ್ನು ಎಲ್ಲಾ ಸಮುದಾಯದವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ಹೇಳಿದರು. ಅವರು ಮಂಗಳವಾರದಂದು ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ತಮ್ಮ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯು ಇಂದಿನ ಯುಗಕ್ಕೆ ಬಹಳ ಮಹತ್ತರವಾದ ಸಂಗತಿಯಾಗಿದ್ದು ಬದಲಾವ

ಣೆಯಿಂದ ಅವರು ರಾಮಾಯಾಣ ರಚಿಸಿ ಇಡೀ ಪ್ರಪಂಚಕ್ಕೆ ಹೆರುವಾಸಿಯಾದರು ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ರಾಜ್ಯ ಸರಕಾರ ಆಚರಿಸುತ್ತೀರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಭೋವಿ ಗೌರಿಪುರ, ಸಮಾಜದ ಮುಖಂಡರಾದ ಸುರೇಶ ಕಿನ್ನಾಳ್, ಯಮನೂರಪ್ಪ ಭೋವಿ, ದೇವಪ್ಪ ಭಾಗ್ಯನಗರ,ಸೂಚಪ್ಪ ಭೋವಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Top