Breaking News
Home / Koppal News / ಡಿ.೦೭ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಡಿ.೦೭ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಡಿ.೦೭ ರಂದು ಕೊಪ್ಪಳ ಸಾಹಿತ್ಯ ಭವನದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಗೀತೆ, ನಾಟಕ (ಹಿಂದಿ ಅಥವಾ ಇಂಗ್ಲೀಷ್), ಭರತನಾಟ್ಯ, ತಬಲಾ ಸೋಲೋ, ಕೊಳಲು, ಶಾಸ್ತ್ರೀಯ ಸಂಗೀತ, ವೀಣಾ, ಆಶು ಭಾಷಣ, ಶಾಸ್ತ್ರೀಯ ಸಂಗೀತ, ಕುಚುಪುಡಿ ನೃತ್ಯ, ಗಿಟಾರ್ ಸೋಲೊ, ಹಾರ್ಮೊನಿಯಂ ಸೇರಿದಂತೆ ಒಟ್ಟು ೧೬ ಕಲೆಗಳ ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸಂಘಟಿಸಲಾಗುವುದು. ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಯುವಕ-ಯುವತಿಯರು, ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ವಯೋಮಿತಿಯ ಧೃಢೀಕರಣ ಪತ್ರದೊಂದಿಗೆ ನೊಂದಣಿಯಾಗಬೇಕು. ಡಿ.೦೭ ರಂದು ಬೆಳಿಗ್ಗೆ ೯.೦೦ ಗಂಟೆಯೊಳಗಾಗಿ ಸಾಹಿತ್ಯ ಭವನ ಕೊಪ್ಪಳದಲ್ಲಿ ಸಂಘಟಕರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದಾಗಿದೆ.
ತಮ್ಮ ಸಂಸ್ಥೆಯ ಕಾಲೇಜು ಅಥವಾ ಇಲಾಖೆಯ ನೊಂದಾಯಿತ ಸಂಸ್ಥೆಗಳಿಂದ ಭಾಗವಹಿಸುವವರು ಪರವಾನಿಗೆ ಪತ್ರದೊಂದಿಗೆ ನೊಂದಣಿಯಾಗಬೇಕು, ಎಂದಿನಂತೆ ತಮ್ಮ ಸ್ಪರ್ಧೆಯ ಎಲ್ಲಾ ಪರಿಕರಣಗಳನ್ನು ಮತ್ತು ಸ್ಪರ್ಧೆಗೆ ಬೇಕಾದ ಸಾಮಾನುಗಳನ್ನು ಸಂಗೀತ ವಾದ್ಯಗಳೊಂದಿಗೆ ಹಾಜರಿರಲು ಸೂಚಿಸಲಾಗಿದೆ, ಇಲಾಖೆಯಿಂದ ತಾಲೂಕು ಕೇಂದ್ರ ಸ್ಥಾನದಿಂದ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಸಾಮಾನ್ಯ ದರ ಪ್ರಯಾಣ ಭತ್ಯೆ ನೀಡಲಾಗುವುದು, ಇಲಾಖೆಯಲ್ಲಿ ನೊಂದಣಿಯಾದ ಯುವಕ/ಯುವತಿ ಸಂಘ/ಸಂಸ್ಥೆಯವರು ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದ್ದು. ಭಾಗವಹಿಸದೇ ಇರುವ ಸಂಘ ಸಂಸ್ಥೆಗಳ ಮುಂದಿನ ವರ್ಷದ ನವೀಕರಣವನ್ನು ಮಾಡಲಾಗುವುದಿಲ್ಲ, ಭಾಗವಹಿಸಿದ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆ ಇರುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಕೊಪ್ಪಳ ತಾಲೂಕ ಎನ್.ಎಸ್.ಪಾಟೀಲ್ ಮೊ.ನಂ.೯೯೮೦೮೫೨೭೩೫, ಕುಷ್ಟಗಿ ತಾಲೂಕ ಧರ್ಮಕುಮಾರ ಕಂಬಳಿ, ಮೊ.ನಂ.೯೯೮೦೧೯೦೭೧೨, ಯಲಬುರ್ಗಾ ತಾಲೂಕ ಬಸವರಾಜ್    ಮೊ.ನಂ.೯೪೮೧೫೫೦೬೩೮, ಗಂಗಾವತಿ ತಾಲೂಕ ತಿಪ್ಪಯ್ಯ ಸ್ವಾಮಿ ಹಿರೇಮಠ ಮೊ.ನಂ.೯೦೦೮೩೬೩೬೭೦ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಅವರು ತಿಳಿಸಿದ್ದಾರೆ.

About admin

Leave a Reply

Scroll To Top